ನವದೆಹಲಿ:
ದೇಶದ ಟೆಲಿಕಾಂ ಜಗತ್ತಿನ ಧೃವತಾರೆಗಳೆಂದು ಹೆಸರು ವಾಸಿಯಾಗಿದ್ದ ವೊಡಾಫೋನ್ ಐಡಿಯಾ, ಏರ್ ಟೆಲ್ ನ ನೌಕರರ ಭವಿಷ್ಯ ಡೋಲಾಯಮಾನವಾಗಿದ್ದು ,ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಕೆಲಸಗಳನ್ನು ಹುಡುಕುತ್ತಿದ್ದಾರೆ ಎನ್ನಲಾಗಿದೆ.
ಹಿಂದೆಂದೂ ಅನುಭವಿಸದಂತಹ ನಷ್ಟವನ್ನು ಈ ಎರಡೂ ಕಂಪನಿಗಳು ಎದುರಿಸುತ್ತಿದ್ದು . ಜೊತೆಗೆ ಬೃಹತ್ ಪ್ರಮಾಣದ ಮೊತ್ತವನ್ನು ಬಾಕಿ ನೀಡುವ ಜವಾಬ್ದಾರಿ ಹೆಗಲೇರಿದೆ. ಪರಿಣಾಮವಾಗಿ ಉತ್ತಮ ಭವಿಷ್ಯ ಹುಡುಕುತ್ತಿರುವ ಉದ್ಯೋಗಿಗಳು ಹೊಸ ಉದ್ಯೋಗಗಳನ್ನು ಎದುರುನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ತಜ್ಞ ಸಿಬ್ಬಂದಿ ಸಂಸ್ಥೆಯಾಗಿರುವ ಎಕ್ಸ್ಫೆನೋ ನೀಡಿರುವ ಮಾಹಿತಿಯ ಪ್ರಕಾರ ಕೆಲವು ವಾರಗಳಿಂದ ವೊಡಾಫೋನ್ ಐಡಿಯಾದಿಂದ 7,000 ಪ್ರೊಫೈಲ್ ಗಳು ಹಾಗೂ ಏರ್ ಟೆಲ್ ನಿಂದ 5,000 ಪ್ರೊಫೈಲ್ ಗಳು ಹೊಸ ಉದ್ಯೋಗಕ್ಕಾಗಿ ಜಾಬ್ ಪೋರ್ಟಲ್ ನಲ್ಲಿ ಅಪ್ ಲೋಡ್ ಆಗಿವೆ. ಅಂದರೆ ವೊಡಾಫೋನ್ ನ ಶೇ.70 ರಷ್ಟು ಹಾಗೂ ಏರ್ ಟೆಲ್ ನ ಶೇ.30 ರಷ್ಟು ಸಿಬ್ಬಂದಿಗಳು ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
