ಕೊರೋನಾ ಲಸಿಕೆ : ಜಗತ್ತು ಭಾರತದತ್ತ ನೋಡುತ್ತದೆ : ಬಿಲ್ ಗೇಟ್ಸ್

ನವದೆಹಲಿ

    ಜಾಗತಿಕ ಮಟ್ಟದಲ್ಲಿ ಭಾರತವು ಮುಂಚೂಣಿ ಲಸಿಕೆ ಉತ್ಪಾದಕ ದೇಶವಾಗಿರುವುದರಿಂದ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿದ್ದಾರೆ. ‘ಭಾರತವು ಮುಂಚೂಣಿ ಲಸಿಕೆ ಉತ್ಪಾದನಾ ದೇಶವಾಗಿದೆ. ಕೋವಿಡ್ 19 ಲಸಿಕೆಗಳ ಉತ್ಪಾದನೆಗೆ ನಮಗೆ ಭಾರತದ ಸಹಕಾರ ಬೇಕಿದೆ. ಅಭಿವೃದ್ಧಿಶೀಲ ದೇಶಗಳಿಗೆ ಲಸಿಕೆಯಲ್ಲಿ ಕೆಲವು ಲಭ್ಯವಾಗಬಹುದು ಎಂಬ ಕಾರಣಕ್ಕೆ ಜಗತ್ತು ಭಾರತದತ್ತ ನೀಡುತ್ತಿದೆ’ ಎಂದು ಬಿಲ್ ಗೇಟ್ಸ್ ತಿಳಿಸಿದ್ದಾರೆ.

ಪಿಟಿಐ ಜತೆ ಮಾತನಾಡಿರುವ ಬಿಲ್ ಗೇಟ್ಸ್, ಕೊರೊನಾ ವೈರಸ್ ಲಸಿಕೆಗಾಗಿ ಭಾರತದೊಂದಿಗೆ ಮಧ್ಯಸ್ಥಿಕೆ ವಹಿಸುವ ತಮ್ಮ ಯೋಜನೆ ಬಗ್ಗೆ ತಿಳಿಸಿದ್ದಾರೆ. ‘ಲಸಿಕೆಯನ್ನು ತೆಗೆದುಕೊಳ್ಳುವ ಮತ್ತು ಭಾರತದಲ್ಲಿ ಉತ್ಪಾದನೆ ಮಾಡುವುದರಲ್ಲಿ ಮಧ್ಯಸ್ಥಿಕೆ ವಹಿಸಲು ಯೋಜನೆ ಇದೆ. ಆ ಲಸಿಕೆ ಆಸ್ಟ್ರಾಜೆನೆಕಾ, ಆಕ್ಸ್‌ಫರ್ಡ್, ನೋವಾವ್ಯಾಕ್ಸ್ ಅಥವಾ ಜಾನ್ಸನ್ ಆಂಡ್ ಜಾನ್ಸನ್ ಯಾರಿಂದ ಬಂದರೂ ಅದಕ್ಕೆ ಸಿದ್ಧ’ ಎಂದಿದ್ದಾರೆ.

    ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಕೋವಿಡ್ 19 ಲಸಿಕೆ ಉತ್ಪಾದನೆ ಶುರುವಾಗುವ ಸಾಧ್ಯತೆ ಇದೆ. ಖಂಡಿತವಾಗಿಯೂ ನಾವು ಭಾರತದಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆ ಪಡೆಯಲು ಬಯಸಿದ್ದೇವೆ. ಅದು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತಿಳಿದ ಬಳಿಕ ಮುಂದಿನ ವರ್ಷ ನಮ್ಮ ಯೀಜನೆಗಳ ಮೇಲೆ ಗಮನ ಹರಿಸುತ್ತೇವೆ’ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap