ಜೈಪುರ:
ರಾಜಸ್ಥಾನ ಚುನಾವಣಾ ಪ್ರಚಾರದ ವೇಳೆ ಮಾತನಾಡುವ ಭರದಲ್ಲಿ ತಾನೊಬ್ಬ ಹಿಂದೂ ಸಾದುವಾಗಿದ್ದೇ ಎಂಬುದನ್ನೇ ಮರೆತ ಯೋಗಿ ಆದಿತ್ಯಾನಾಥ್ ಭಜರಂಗಬಲಿಯನ್ನು ಓರ್ವ ದಲಿತ ಎಂದು ಉಲ್ಲೇಖಿಸುವ ಮೂಲಕ ಹಿಂದೂಗಳ ಕೆಂಗಣಿಗೆ ಗುರಿಯಾಗಿರುವುದಲ್ಲದೇ ಕೋರ್ಟ್ ನಿಂದ ನೋಟೀಸ್ ಅನ್ನು ಪಡೆದದ್ದಾರೆ . ಇದನ್ನು ರಾಜಸ್ಥಾನದ ಬಲಪಂಥೀಯ ಗುಂಪೊಂದು ಇಂದು ಲೀಗಲ್ ನೋಟಿಸ್ ಜಾರಿ ಮಾಡಿದೆ.
ಚುನಾವಣೆ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಅಲ್ವಾರ್ ಜಿಲ್ಲೆಯ ಮಾಳಖೇಡದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಯೋಗಿ ಆದಿತ್ಯನಾಥ್ ಅವರು, ಹನುಮಂತ ಒಬ್ಬ ಅರಣ್ಯ ನಿವಾಸಿಯಾಗಿದ್ದು, ಎಲ್ಲಾ ಭಾರತೀಯ ಸಮುದಾಯಗಳನ್ನು ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸಲು ಕೆಲಸ ಮಾಡಿದ ಒಬ್ಬ ದಲಿತ ಎಂದು ಹೇಳಿದ್ದರು ಎಂದು ನೋಟಿಸ್ ನಲ್ಲಿ ಉಲ್ಲೇಖಿಸಿದೆ.