ಯುವಕರು ರಾಜಕೀಯಕ್ಕೆ ಬರಬೇಕು; ಮಮತಾ

ಬೇಲ್ಪಾಹರಿ

      ಬಿಜೆಪಿ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೆಚ್ಚಿನ ಯುವಕರು ರಾಜಕೀಯ ಪ್ರವೇಶಿಸಿ ಬದಲಾವಣೆ ತರಬೇಕು ಎಂದು ಕರೆ ನೀಡಿದ್ದಾರೆ.

     ಜಾರ್ಗ್ರಾಮ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಸುಳ್ಳು ಹೇಳಿಕೆಗಳ ಮೂಲಕ ಜನರಲ್ಲಿ ದ್ವೇಷವನ್ನು ತುಂಬುತ್ತಿದ್ದಾರೆ. ಸುಳ್ಳು ಭರವಸೆಗಳಿಂದ ಜನರ ದಾರಿ ತಪ್ಪಿಸುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಯಾವುದೆ ಪೂಜೆಗಳು ನಡೆಯುವುದಿಲ್ಲ ಎಂದು ಬಿಜೆಪಿ ಹೇಳಿಕೆ ನೀಡಿದೆ.

     ಹಾಗಾದರೆ, ದುರ್ಗಾ ಪೂಜೆ, ಸರಸ್ವತಿ ಪೂಜೆ ಹಾಗೂ ಇತರ ಹಬ್ಬಗಳನ್ನು ಇಲ್ಲಿನ ಜನರು ಆಚರಿಸುವುದಿಲ್ಲವೇ? ಈ ರಾಜ್ಯದಲ್ಲಿ ನಡೆಯದಿರುವುದು ಎಂದರೆ ಅದು ಮೋದಿಯ ಅಲೆ. ಅವರನ್ನು ರಾಜ್ಯಕ್ಕೆ ಬರದಂತೆ ತಡೆಯಲು ಯತ್ನಿಸೋಣ. ರಾಜ್ಯದ ಕೋಮು ಸೌಹಾರ್ದತೆಯನ್ನು ಕಾಪಾಡೋಣ ಎಂದರು.

     ಇದು ಯಾವುದೆ ಪಂಚಾಯತ್ ಇಲ್ಲವೇ ರಾಜ್ಯ ಚುನಾವಣೆಯಲ್ಲ. ಇದು ಕೇಂದ್ರ ಸರ್ಕಾರಕ್ಕಾಗಿ ನಡೆಯುತ್ತಿರುವ ಚುನಾವಣೆ. ಕಳೆದ ಐದು ವರ್ಷಗಳಲ್ಲಿ ಮೋದಿ ಏನು ಮಾಡಿದ್ದಾರೆ. ಕೇವಲ ಇಂಧನ ದರ ಹೆಚ್ಚಳ, ಅಡುಗೆ ಅನಿಲದ ದರ ಹೆಚ್ಚಳ, ನೋಟು ಅಮಾನ್ಯೀಕರಣ, ಇದರಿಂದ ಜನರು ಕಷ್ಟಕ್ಕೆ ಸಿಲುಕಿದರು, ಸಾವಿಗೆ ಶರಣಾದರು ಎಂದು ಕಿಡಿಕಾರಿದರು.

      ಯುವಕರು ತೃಣಮೂಲ ಕಾಂಗ್ರೆಸ್ ನ ಸಿದ್ಧಾಂತವನ್ನು ಮುಂದುವರಿಸಬೇಕು. ತಾವು ಯುವ ಕಾರ್ಯಕರ್ತೆಯಾಗಿದ್ದು, ವಿದ್ಯಾರ್ತಿ ನಾಯಕಿ ಕೂಡ ಅಗಿದ್ದೆ ಎಂದು ಕರೆ ನೀಡಿದರು. ಚಂಡಮಾರುತ ತಡೆಯಲು ಕಂಟ್ರೋಲ್ ರೂಂಗಳನ್ನು ನಿರ್ಮಿಸಲಾಗಿತ್ತು. ಸ್ವತಃ ತಾವು ಅಲ್ಲಿದ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದೇವೆ. ಹಾನಿಗೊಳಗಾದವರು ಆತಂಕಪಡುವ ಅಗತ್ಯವಿಲ್ಲ. ನಿಮ್ಮೊಂದಿಗೆ ಸರ್ಕಾರವಿದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap