ಯು.ಪಿ.ಎಸ್.ಸಿ ಪ್ರಿಲಿಮಿನರಿ ಪರೀಕ್ಷೆಗೆ ಮಾಸ್ಕ್ ಕಡ್ಡಾಯ..!

ನವದೆಹಲಿ : 

     ಕೇಂದ್ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮಾಸ್ಕ್ ಧರಿಸಿವುದು ಕಡ್ಡಾಯ ಎಂದು ಯುಪಿಎಸ್‌ಸಿ ತಿಳಿಸಿದೆ.

     ಕೊರೊನಾ ಸಂಕಷ್ಟದಲ್ಲೇ ಅಕ್ಟೋಬರ್ 4 ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ಯುಪಿಎಸ್‍ಸಿ ದಿನಾಂಕ ನಿಗದಿ ಮಾಡಿದ್ದು, ಇದಕ್ಕಾಗಿ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. 

  •  ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು.
  • ಮಾಸ್ಕ್ ಇಲ್ಲದೇ ಪರೀಕ್ಷೆ ಕೊಠಡಿಗಳಿಗೆ ಅನುಮತಿಸುವುದಿಲ್ಲ.
  • ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಹಾಗೂ ಸ್ವಚ್ಛತೆಯನ್ನು ಕಾಪಾಡಬೇಕು. 
  • ಪಾರದರ್ಶಕವಾಗಿರುವ ಬಾಟಲುಗಳಲ್ಲಿ ಸ್ಯಾನಿಟೈಜರ್ ‌ಅನ್ನು ಸಹ ಅಭ್ಯರ್ಥಿಗಳೇ ತರಬೇಕು

     ಈಗಾಗಲೇ ಪ್ರವೇಶ ಪತ್ರಗಳನ್ನು ವೆಬ್‍ಸೈಟ್ ನಲ್ಲಿ ಬಿಡುಗಡೆ ಮಾಡಿದ್ದು, ಗುರುತಿನ ಚೀಟಿಯೊಂದಿಗೆ ಬೆಳಗ್ಗೆ 9:20ರ ವೇಳೆಗೆ ಪರೀಕ್ಷೆ ಕೊಠಡಿಗಳು ಪ್ರವೇಶಿಸಬೇಕು. ಕಪ್ಪು ಬಾಲ್ ಬಳಕೆಗೆ ಮಾತ್ರ ಅವಕಾಶ ಎಂದು ತಿಳಿಸಲಾಗಿದೆ.

      ಮೇ 31ರಂದು ಪ್ರಿಲಿಮನರಿ ಪರೀಕ್ಷೆ ನಡೆಯಬೇಕಿತ್ತು. ಕೋವಿಡ್‌-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದ ಕಾರಣ ಮುಂದೂಡಲಾಗಿತ್ತು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link