ನವದೆಹಲಿ:
ಒಂದು ದೇಶದ ಷೇರು ಮಾರುಕಟ್ಟೆಯ ತುಲನೆ ಮಾಡುವಲ್ಲಿ ಪ್ರಮುಖ ಅಧ್ಯಯನ ಸಂಸ್ಥೆ ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ ಶುಕ್ರವಾರ 2019 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತ ಮಾಡಿರುವ ಆರ್ಥಿಕ ಸಾಧನೆಯಲ್ಲಿ ಜಿಡಿಪಿ ಬೆಳವಣಿಗೆಯ ಕುರಿತು ಅಂಕಿ ಅಂಶದ ಕುರಿತಾಗಿ ಹೇಳಿದ್ದು ಈ ಹಿಂದೆ ಭಾರತದ ಸರಾಸರಿ ಜಿಡಿಪಿ ಅಂದಾಜು 6.8% ಇತ್ತು ಮತ್ತು ಸತತ ಮಾರುಕಟ್ಟೆ ಏರಿಳಿತ ಮತ್ತು ಇನ್ನಿತರೆ ಅಂಶಗಳಿಂದಾಗಿ ಜಿಡಿಪಿಯೂ 6.2% ಕ್ಕೆ ಕುಸಿದಿದೆ ಎಂದು ಮೂಡಿಸ್ ತಿಳಿಸಿದೆ.2020 ಕ್ಯಾಲೆಂಡರ್ ವರ್ಷದಲ್ಲಿ, ಭಾರತದ ಜಿಡಿಪಿ ಅಂದಾಜು 6.7% ಕ್ಕೆ ಹೋಗಬಹುದು ಎಂಧು ಅಭಿಪ್ರಾಯ ಪಟ್ಟಿದೆ.
ಏಷ್ಯಾ ಖಂಡದ 16 ಪ್ರಗತಿಶೀಲ ಆರ್ಥಿಕತೆಗಳ ಧ್ಯಯನ ನಡೆಸಿ ಆಯಾ ಆರ್ಥಿಕತೆಗೆ ತಕ್ಕಂತೆ ಮೂಡೀಸ್ ರೇಟಿಂಗ್ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ . ಏಷ್ಯಾದಲ್ಲಿ ಸದ್ಯ ಇರುವ ಸ್ಥಿರವಾದ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಗಳ ಹೊರತಾಗಿಯೂ ದುರ್ಬಲವಾಗುತ್ತಿರುವ ವಿದೇಶಿ ವ್ಯಾಪಾರ ಇನ್ನೂ ಮುಂತಾದ ಅತ್ಯಂತ ಸೂಕ್ಷ್ಮ ವ್ಯಾಪಾರ ಮತ್ತು ಹೂಡಿಕೆ ಆಧಾರದ ಮೇಲೆ ಜಿಡಿಪಿ ಬೆಳವಣಿಗೆಯನ್ನು ನಿರ್ಧರಿಸಲಾಗುವುದು ಎಂದು ಮೂಡಿಸ್ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
