ಯೂರಿಯಾ ಸಮಸ್ಯೆಗೆ ಗಡ್ಕರಿ ನೂತನ ಐಡಿಯಾ…!!

ನಾಗ್ಪುರ:
       ನಿತಿನ್ ಗಡ್ಕರಿಯವರು ತಾವು ಮಾಡುವ ವಿನೂತನ ಐಡಿಯಾಗಳಿಂದಲೇ ಪ್ರಸಿದ್ಧರು ಅವರು ದೇಶದಲ್ಲಿ ಕಾಡುತ್ತಿರುವ ರೈತರ ಯೂರಿಯಾ ಸಮಸ್ಯೆಗೆ ವಿನೂತನವಾದ ಪರಿಹಾರ ಕಂಡು ಹಿಡಿದಿದ್ದಾರೆ .
        ಕೃಷಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಆಮದಾಗುತ್ತಿದ್ದು, ಇದನ್ನು ತಡೆಗಟ್ಟುವುದಕ್ಕೆ ಗಡ್ಕರಿ ವಿನೂತನವಾದ ಕಲ್ಪನೆಯೊಂದನ್ನು ಪ್ರಸ್ತಾಪಿಸಿದ್ದಾರೆ. ಅದೇನೆಂದರೆ ಮೂತ್ರದ ಶೇಖರಣೆಯಿಂದ ಯೂರಿಯಾ ಸಮಸ್ಯೆಯನ್ನು ದೂರ ಮಾಡಬಹುದಂತೆ  ಹೌದು ಕೇಳುವುದಕ್ಕೆ ಸ್ವಲ್ಪ ವಿಚಿತ್ರ ಎನಿಸಿದರೂ ಗಡ್ಕರಿ ಇಂಥದ್ದೊಂದು ವಿಚಿತ್ರವಾದ ಕಲ್ಪನೆಯೊಂದನ್ನು ಸಂಶೋಧಕರಿಗೆ ಸಲಹೆ ನೀಡಿದ್ದಾರೆ.

 

 

 

         ನಾಗ್ಪುರ ಪುರಸಭೆ ಕಾರ್ಪೊರೇಷನ್ ನ ಮೇಯರ್ ಇನೋವೇಷನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ನಿತಿನ್ ಗಡ್ಕರಿ, ವಿಮಾನ ನಿಲ್ದಾಣಗಳಲ್ಲಿ ಮೂತ್ರವನ್ನು ಶೇಖರಿಸಲು ಸಲಹೆ ನೀಡಿದ್ದೇನೆ. ನಾವು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾವನ್ನು ಆಮದು ಮಾಡಿಕೊಳ್ಳುತ್ತೇವೆ.
         ಆದರೆ ನಾವು ದೇಶದ ಜನತೆ ಮೂತ್ರ ಸಂಗ್ರಹಣೆ ಮಾಡಿದರೆ ಯೂರಿಯಾ ಆಮದು ಮಾಡಿಕೊಳ್ಳುವ ಅಗತ್ಯವೇ ಇರುವುದಿಲ್ಲ, ಮೂತ್ರದಲ್ಲಿ ವಿಶೇಷ ಸಾಮರ್ಥ್ಯವಿದೆ, ಮನುಷ್ಯನ ಮೂತ್ರದಿಂದ ಜೈವಿಕ ಇಂಧನವನ್ನೂ ತಯಾರಿಸಬಬಹುದು ಯಾವುದೂ ವ್ಯರ್ಥವಾಗುವುದಿಲ್ಲ. ಅದರಿಂದ ಅಮೋನಿಯಂ ಸಲ್ಫೇಟ್ ಹಾಗೂ ನೈಟ್ರೋಜನ್ ಲಭ್ಯವಾಗುತ್ತದೆ

 

 

 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap