ಸರ್ಜಿಕಲ್ ಸ್ಟ್ರೈಕ್ ಎರಡನೆ ವರ್ಷಾಚರಣೆ

ಹೊಸದಿಲ್ಲಿ: 

     ಭಾರತದ ಉರಿ ಸೇನಾ ನೆಲೆ ಮೇಲೆ ಉಗ್ರರು ನಡೆಸಿದ ಆಕ್ರಮಣಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪಿಓಕೆ ನಲ್ಲಿದ್ದ ಉಗ್ರರ ಶಿಬಿರಗಳನ್ನು ಪುಡಿಗಟ್ಟಿದ ಸರ್ಜಿಕಲ್‌ ದಾಳಿಯ ಎರಡನೇ ವರ್ಷಾಚರಣೆಗೆ ಮುನ್ನವೇ ಕೇಂದ್ರ ಸರಕಾರ ರೋಚಕ ಸಾಹಸದ ಮತ್ತೆರಡು ವೀಡಿಯೋಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಸರ್ಜಿಕಲ್‌ ದಾಳಿ ನಡೆದೇ ಇಲ್ಲಾ ಎನ್ನುವವರಿಗೆ ತಕ್ಕ ಉತ್ತರವನ್ನು ಕೊಟ್ಟಿದೆ. 

ವಿಶೇಷ ಪಡೆಯ ಕಮಾಂಡೊಗಳು ಕಗ್ಗತ್ತಲ ರಾತ್ರಿಯಲ್ಲಿ ಜೀವ ಪಣಕ್ಕಿಟ್ಟು 2016ರ ಸೆಪ್ಟೆಂಬರ್‌ 28-29ರಂದು ವೀರಾವೇಷದಿಂದ  ಕಾರ್ಯಾಚರಣೆ ಮಾಡಿ ಸುಮಾರು 38 ಉಗ್ರರನ್ನು ಕೊಂದುಹಾಕಿ ಉಗ್ರ ಶಿಬಿರಗಳನ್ನು ಧ್ವಂಸಗೊಳಿಸಿದ ಸಾಹಸ ವೀಡಿಯೋದಲ್ಲಿವೆ. ಥರ್ಮಲ್‌ ಇಮೇಜಿಂಗ್‌ ಮತ್ತು ಡ್ರೋನ್‌ಗಳಿಗೆ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಸೆರೆಹಿಡಿದ ದೃಶ್ಯಾವಳಿಗಳು ಇದರಲ್ಲಿವೆ

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link