
ಪೊಲೀಸರ ರಾಜೀನಾಮೆ ಬಗ್ಗೆ ಮಾತನಾಡಿರುವ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣಿಯಮ್ ಅವರು, ರಾಜ್ಯದಲ್ಲಿರುವ ಎಸ್ ಪಿಒ ಅಧಿಕಾರಿಗಳಿಗೆ ಹೋಲಿಕೆ ಮಾಡಿದರೆ ರಾಜಿನಾಮೆ ನೀಡಿರುವ ಅಧಿಕಾರಿಗಳ ಸಂಖ್ಯೆ ತೀರಾ ಕಡಿಮೆ. ರಾಜ್ಯದಲ್ಲಿ ಸುಮಾರು 30 ಸಾವಿರ ಎಸ್ ಪಿಒ ಅಧಿಕಾರಿಗಳಿದ್ದು, ಈ ವರೆಗು 40 ಅಧಿಕಾರಿಗಳು ಮಾತ್ರ ರಾಜಿನಾಮೆ ನೀಡಿದ್ದಾರೆ. ಹೀಗಾಗಿ ಎಸ್ ಪಿಒ ಅಧಿಕಾರಿಗಳು ಉಗ್ರರಿಗೆ ಹೆದರಿದ್ದಾರೆ ಎಂಬ ತರ್ಕ ಸರಿಯಲ್ಲ. ಉಗ್ರರ ಮಟ್ಟ ಹಾಕಲು ಸೇನೆ ಸನ್ನದ್ಧವಾಗಿದ್ದು, ಉಗ್ರರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ನಾವು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.
