ಅದೃಷ್ಟವಶಾತ್ ಬದುಕುಳಿದ ಬಾಲಕ

ನವದೆಹಲಿ: 

        ಮುಂಬೈ ನಗರದ ಗೋರೆಗಾಂವ್‍ನ ಸದ್ಗುರು ಕಾಂಪ್ಲೆಕ್ಸ್ ನಲ್ಲಿ ಅಕಸ್ಮಿಕವಾಗಿ ಕಾರಿನ ಕೆಳಗೆ ಸಿಲುಕಿದ್ದ 8 ವರ್ಷದ ಬಾಲಕನೊಬ್ಬ, ಅದೃಷ್ಟವಶಾತ್ ಬದುಕುಳಿದ ವಿಡಿಯೋವನ್ನು ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ ಮತ್ತು ಇದೇ 24ರಂದು ಈ ಘಟನೆ ಸಂಭವಿಸಿದೆ. ಈ ದೃಶ್ಯವು ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮುಂದೆ ಹೇಳುತ್ತಾ ‘ಇದನ್ನು ನೋಡುವುದರಿಂದ ಹೆಚ್ಚಿನದ್ದನ್ನು ಕಲಿಯಬಹುದು’ ಎಂದು ಬೆಂಗಳೂರು ನಗರ ಪೊಲೀಸರು ತಮ್ಮ ಟ್ವಿಟರ್ ಖಾತೆಯ ಪುಟದಲ್ಲಿ ಗುರುವಾರ ಬೆಳಗ್ಗೆ ವಿಡಿಯೋ ಟ್ವೀಟ್ ಮಾಡಿದ್ದಾರೆ.

ವಿಡಿಯೋದಲ್ಲಿರುವ ಘಟನೆಯ ವಿವರ:

       ಸಂಜೆ  ಮಕ್ಕಳು ರಸ್ತೆಯ ಮೇಲೆ ಆಟ ಆಡುತ್ತಿದ್ದರು , ಅವರಲ್ಲಿ ಕೆಂಪು ಟಿ-ಶರ್ಟ್ ಧರಿಸಿದ್ದ ಬಾಲಕನೊಬ್ಬ ಕುಳಿತು ಶೂ ಲೇಸ್ ಕಟ್ಟಿಕೊಳ್ಳುತಿರುತ್ತಾನೆ. ಇದೇ ವೇಳೆ ಆತನ ಹಿಂದೆ ನಿಲ್ಲಿಸಿದ್ದ ಕಾರನ್ನು ಮಹಿಳೆಯೊಬ್ಬರು ಕಾರು ಚಾಲನೆ ಮಾಡಿದ್ದಾರೆ. ಕಾರಿನ ಹೆಡ್‍ಲೈಟ್ ಆನ್ ಮಾಡಿಕೊಂಡೆ ಹಿಂದಕ್ಕೆ ಚಾಲನೆ ಮಾಡಿದ್ದಾರೆ , ಬಳಿಕ ಮುಂದೆ ಸಾಗುತ್ತಾರೆ. ಆದರೆ ಕಾರಿನ ಮುಂದೆ ಇರುವ ಬಾಲಕ ಇರುವುದನ್ನು ಅವರು ನೋಡಿಲ್ಲ. ಇತ್ತ ಬಾಲಕನೂ ಕಾರು ಬರುವುದನ್ನು ಗಮನಿಸದೇ ಲೇಸ್ ಕಟ್ಟಿಕೊಳ್ಳುವಲ್ಲಿ ನಿರತನಾಗಿರುತ್ತಾನೆ.

      ಕಾರು ಬಾಲಕನ ಮೇಲೆ ಹಾದು ಹೋಗಿದೆ. ಬಳಿಕ ಕಾರು ಮುಂದೆ ಸಾಗುತ್ತಿದ್ದಂತೆ ಬಾಲಕ ಹೊರಗೆ ಬರುತ್ತಾನೆ. ಅದೃಷ್ಟವಶಾತ್ ಬಾಲಕ ಬದುಕುಳಿದಿದ್ದು, ಗಾಬರಿಯಿಂದ ಸ್ನೇಹಿತರ ಬಳಿಗೆ ಓಡಿ ಹೋಗುತ್ತಿರುವುದನ್ನು ಗಮನಿಸಬಹುದು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap