ಬಿಹಾರ: 

ರೌಡಿ ರಾಜ್ಯ ಎಂದೇ ಕರೆಲ್ಪಡುವ ಬಿಹಾರದಲ್ಲಿ ಒಂದು ಕುಟುಂಬದ ಸ್ಕ್ಯಾಮ್ ಗಳ ಬಗ್ಗೆ ಬರೆದರು ಎಂಬ ಒಂದೇ ಕಾರಣಕ್ಕೆ ಓರ್ವ ಪತ್ರಕರ್ತನಿಗೆ ಕೊಲೆ ಬೆದರಿಕೆ ಹಾಕುವಷ್ಟು ಮುಂದುವರೆದಿದ್ದಾರೆ ಆ ಕುಟುಂಬ ಬೇರಾವುದೂ ಅಲ್ಲ ಶ್ರೀ ಲಾಲು ಪ್ರಸಾದ್ ಯಾದವ್ ಅವರದ್ದೆ .
ಬಿಹಾರದ ಆಂಗ್ಲ ಪತ್ರಿಕೆ ಟೆಲಿಗ್ರಾಫ್ ನಲ್ಲಿ ಪತ್ರಕರ್ತರಾಗಿರುವ ಅಮಿತ್ ಭೆಲಾರಿ, ಲಾಲು ಪ್ರಸಾದ್ ಯಾದವ್ ಹಾಗೂ ಆರ್ ಜೆಡಿ ಬಗ್ಗೆ ವರದಿ ಪ್ರಕಟಿಸಿದ್ದಕ್ಕಾಗಿ ತಮಗೆ ಕೊಲೆ ಬೆದರಿಕೆ ಬಂದಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅ.04 ರಂದು ಅನಾಮಿಕ ವ್ಯಕ್ತಿಯೊಬ್ಬರು ತಮಗೆ ಕರೆ ಮಾಡಿ ಅಸಭ್ಯ ಭಾಷೆಯಲ್ಲಿ ಮಾತನಾಡುವುದೂ ಅಲ್ಲದೇ ಗುಂಡಿಕ್ಕಿ ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಲಾಲು ಅವರ ಕುಟುಂಬದ ಬಗ್ಗೆ ಕೆಟ್ಟದಾಗಿ ಬರೆದ್ದೀಯ, ನಿಮ್ಮ ಮನೆಗೆ ಬಂದು ನಿನ್ನನ್ನು ಗುಂಡಿಕ್ಕಿ ಹತ್ಯೆ ಮಾಡುತ್ತೇನೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ. ಇದನ್ನು ಆಡಿಯೋ ದಾಖಲೆಯ ಸಹಿತ ಅಮಿತ್ ಭೆಲಾರಿ ಪೊಲೀಸ್ ಠಾಣೆಗೆ ನೀಡಿದ್ದಾರೆ. ಕಳೆದ 10 ವರ್ಷಗಳಿಂದ ಅಮಿತ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದು ಇದೇ ಮೊದಲ ಬಾರಿಗೆ ತಮಗೆ ಈ ರೀತಿ ಬೆದರಿಕೆ ಕರೆ ಬಂದಿರುವುದಾಗಿ ಹೇಳಿದ್ದಾರೆ.
ಪತ್ರಕರ್ತರು ನೀಡಿರುವ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಪ್ರಾರಂಭಿಸಿದ್ದೇವೆ ಎಂದು ಪಾಟ್ನಾ ಎಸ್ಎಸ್ ಪಿ ಮನು ಮಹಾರಾಜ್ ಹೇಳಿದ್ದಾರೆ.
ನಮ್ಮದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ರಾಜಕಾರಣಿಗಳಿದ್ದಾರೆ ನಿಜ. ಅದು ಹೇಗೆ ಎಎಂದರೆ ಪತ್ರಿಕೆ ಮುಚ್ಚಿದುವುದು ಇಲ್ಲಾ ಮಾನ ನಷ್ಠ ಮೊಕದ್ದಮೆ ಹೂಡುವುದು ಈ ರೀತಿಯಾಗಿ ಮಾಡುತ್ತಾರೆ,ಆದರೆ ಒಬ್ಬ ಪತ್ರಕರ್ತನನ್ನೇ ಕೊಲ್ಲುತ್ತೇನೆ ಎಂಬುದು ಅಮಾನುಷ ಕೃತ್ಯ ಎಂದು ಎಲ್ಲಾ ಬಿಹಾರದ ಪತ್ರಿಕೆಗಳು ಅಭಿಪ್ರಾಯ ಪಟ್ಟಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








