ದೆಹಲಿ:
ಸಾಮಾಜಿಕ ಹೋರಾಟಗಾರರನ್ನು ಭೀಮಾ-ಕೊರೆಗಾಂವ್ ಪ್ರಕರಣ ಸಂಬಂಧ ಬಂಧಿಸಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಇಂದು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಬಂಧಿತ ವಿಚಾರವಾದಿಗಳ ಬಿಡುಗಡೆ ಮತ್ತು ಎಸ್‌ಐಟಿ ತನಿಖೆಗೆ ಒತ್ತಾಯಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪೀಠ, ನಾಲ್ಕು ವಾರಗಳ ಕಾಲ ಐವರು ವಿಚಾರವಾದಿಗಳ ಗೃಹಬಂಧನವನ್ನು ವಿಸ್ತರಿಸಿದೆ. ಅಲ್ಲದೆ ಎಸ್‌ಐಟಿ ತನಿಖೆ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಪುಣೆ ಪೊಲೀಸರೇ ತನಿಖೆ ಮುಂದುವರೆಸಬೇಕು ಎಂದು ಆದೇಶಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ