ತೆಲಂಗಾಣ:
ಐ-ಟಿ ಅಧಿಕಾರಿಗಳು ಇಂದು ಮುಂಜಾನೆ ಶ್ರೀ ರೇವಂತ್ ರೆಡ್ಡಿಯವರ ಜುಬಿಲೀ ಹಿಲ್ಸ್ ನಿವಾಸ ಮತ್ತು ಅವರ ಸಹೋದರರ ಮತ್ತು ಸಂಬಂಧಿಕರನ್ನೂ ಒಳಗೊಂಡಂತೆ ಸುಮಾರು 15 ಇತರ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಮತ್ತು ಅವರ ಕೊಡಂಗಲ್ ನಿವಾಸದಲ್ಲಿ ದಾಳಿ ನಡೆಸಿದ್ದಾರೆ. ರೇವಂತ್ ರೆಡ್ಡಿ ಅವರ ಮೇಲೆ ದಾಳಿ ನಡೆಯುವಾಗ ಅವರು ಕೊಡಂಗಲ್ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿದ್ದರು ಎಂದು ತಿಳಿದು ಬಂದಿದೆ .
ರೇವಂತ್ ರೆಡ್ಡಿ ಅವರು ಒಂದು ವಾರದ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅವರನ್ನು ರಾಜಕೀಯವಾಗಿ ಮುಗಿಸಲು ಸಂಚು ಮಾಡಿತ್ತಿದ್ದಾರೆ ಎಂದು ಆರೋಪಿಸಿದರು ಮತ್ತು ತಮ್ಮ ಮೇಲೆ ದಾಳಿಗಳನ್ನು ನಿರೀಕ್ಷಿಸಬಹುದು ಮತ್ತು ಹಳೆಯ ಪ್ರಕರಣಗಳನ್ನು ಕೆದಕುವ ನಿರೀಕ್ಷೆಯಿದೆ ಎಂದು ಹೇಳಿದ್ದರು. ತೆಲಂಗಾಣ ಡಿ.ಜಿ.ಪಿ ಎಂ. ಮಹೇಂದರ್ ರೆಡ್ಡಿ ಅವರು ಉಸ್ತುವಾರಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದರು .
ಮೂರು ವರ್ಷಗಳ ಹಿಂದೆ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶ್ರೀ ರೇವಂತ್ ರೆಡ್ಡಿಯನ್ನು ಬಂಧಿಸಿದ್ದರು . ಅವರು ತೆಲುಗು ದೇಶಮ್ ಪಕ್ಷ (ಟಿಡಿಪಿ) ದ ಎಂಎಲ್ಸಿ ಅಭ್ಯರ್ಥಿಗೆ ಬೆಂಬಲ ಕೋರಿ ಎಂಎಲ್ಎ ಸ್ಟಿಫನ್ಸನ್ಗೆ 50 ಲಕ್ಷ ರೂಪಾಯಿಗಳನ್ನು ಹಸ್ತಾಂತರಿಸಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಿದ್ದರು . ಅವರಿಗೆ ನಂತರ ಜಾಮೀನು ನೀಡಲಾಯಿತು.
ಅದಾಗ್ಯೂ, ಇತ್ತೀಚೆಗೆ ಎಸಿಬಿ ವಶ ಪಡಿಸಿಕೊಂಡ ಮೊತ್ತದ ಮೂಲ ಪತ್ತೆಹಚ್ಚಲು ತೆಲಂಗಾಣ ಡಿಜಿಪಿಗೆ ಮತ್ತೊಮ್ಮೆ ಬರೆದಿತ್ತು. ಪ್ರತಿಯಾಗಿ ಡಿಜಿಪಿ ಸಹಾಯಕ್ಕಾಗಿ ಆದಾಯ ತೆರಿಗೆ ಇಲಾಖೆಯನ್ನು ಕೇಳಿ ಎಂದಿದ್ದರು ಎಂದು ಹೇಳಲಾಗಿದೆ.
ಇಂತಹ ಬೆದರಿಕೆಗಳಿಂದ ಪಕ್ಷವನ್ನು ನಾಶ ಮಾಡಲು ಸಾಧ್ಯವಿಲ್ಲ ಮತ್ತು ನಾವು ನಿಮ್ಮ ಈ ಕುತಂತ್ರಗಳಿಗೆ ಹೆದರುವುದಿಲ್ಲ ಎಂದು ಟಿಪಿಸಿಸಿ ಹೇಳಿದೆ.
ಟಿಪಿಸಿಸಿ ಅಧ್ಯಕ್ಷ ಎನ್.ಉತ್ತಮ್ ಕುಮಾರ್ ರೆಡ್ಡಿ ಈ ದಾಳಿಗಳನ್ನು ಖಂಡಿಸಿದರು. ರಾಜಕೀಯ ಪಿತೂರಿ ಉತ್ತಮ್ ಕುಮಾರ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೆಸಿಆರ್ ಜೊತೆಗೂಡಿ ವಿರೋಧಿಗಳನ್ನು ಬಲಿಪಶುವನ್ನಾಗಿ ಮಾಡಲು ಯೋಜಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








