ಭುವನೇಶ್ವರ್:
ಭಾರತ ಸೇನೆಯ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಎಸ್ಎಫ್ಸಿ ಅ.06 ರಂದು ರಾತ್ರಿ ನೆಲದಿಂದ ನೆಲಕ್ಕೆ ಚಿಮ್ಮುವ ಬ್ಯಾಲಿಸ್ಟಿಕ್ ಕ್ಷಿಪಣಿ ಪೃಥ್ವಿ-2 ರ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದೆ.
ಕಳೆದ 13 ದಿನಗಳಲ್ಲಿ ಪೃಥ್ವಿ ಕ್ಷಿಪಣಿಯ ಎರಡನೇ ಪರೀಕ್ಷೆ ಇದಾಗಿದ್ದು, ಸತತ ಎರಡನೇ ಪರೀಕ್ಷೆಯಲ್ಲೂ ಹಾರಾಟ ಯಶಸ್ವಿಯಾಗಿದೆ. ಅಬ್ದುಲ್ ಕಲಾಂ ದ್ವೀಪದಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು, 350 ಕಿಮೀ ವ್ಯಾಪ್ತಿಯಲ್ಲಿ ದಾಳಿ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ.
ಡಿಆರ್ ಡಿಒ ದಿಂದ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ಅವಳಿ ಇಂಜಿನಿನ್ ನ್ನು ಹೊಂದಿದೆ. ಹೆಚ್ಚಿನ ನಿಖರತೆಗಾಗಿ ಪರಮಾಣು ಸಿಡಿತಲೆ ರೆಡಾರ್ ಟರ್ಮಿನಲ್ ಗೈಡೆನ್ಸ್ ಸಿಸ್ಟಮ್ ನ್ನು ಅಳವಡಿಕೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
