ನವದೆಹಲಿ:
ಪುಲ್ವಾಮಾ ದಾಳಿಯಲ್ಲಿ ಸುಮಾರು 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಅವರ ಕುಟುಂಬದವರ ಕ್ಷೇಮ ಮತ್ತು ಮುಂದಿನ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಸೇರಿದಂತೆ ನಟರು, ನಿರ್ಮಾಪಕರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಈಗ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಭಾರತೀಯ ಸೈನಿಕರಿಗೆ 1 ಕೋಟಿ ರೂ. ನೀಡಲು ನಿರ್ಧರಿಸಿದ್ದಾರೆ.
ಲತಾ ಮಂಗೇಶ್ಕರ್ ಅವರ ತಂದೆ ದಿ ಶ್ರೀ ಮಾಸ್ಟರ್ ದಿನನಾಥ್ ಮಂಗೇಶ್ಕರ್ ಅವರ ಪುಣ್ಯ ಸ್ಮರಣೆಯ ದಿನದಂದು ಅಂದರೆ ಏಪ್ರಿಲ್ 24 ರಂದು ಭಾರತೀಯ ಸೈನಿಕರಿಗೆ 1 ಕೋಟಿ ರೂ. ಅನುದಾನ ನೀಡುವುದಾಗಿ ಸ್ವತಃ ಅವರೇ ಹೇಳಿದ್ದಾರೆ.