ತೆಲಂಗಾಣ :127 ಜನರಿಗೆ ಆಧಾರ್ ಪ್ರಾಧಿಕಾರದಿಂದ ನೋಟಿಸ್

ತೆಲಂಗಾಣ

      ಹೈದ್ರಾಬಾದ್ ನಗರದಲ್ಲಿ ಸುಮಾರು 127 ಜನರಿಗೆ 127 ಜನರಿಗೆ ಆಧಾರ್ ಪ್ರಾಧಿಕಾರ ನೋಟೀಸ್ ನೀಡಿರುವುದನ್ನು ಸಂಸದ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ.

    ಆಧಾರ್ ಪಡೆಯಲು 127 ಮಂದಿ ಸುಳ್ಳು ದಾಖಲೆ ನೀಡಿದ್ದಾರೆ ಆಧಾರ್ ಪ್ರಾಧಿಕಾರ ಹೇಳಿದ್ದು ಸರ್ಕಾರ ನಿಗದಿ ಪಡಿಸಿರುವ ನಿಗದಿತ ದಾಖಲೆಗಳನ್ನು ನೀಡಿಯೇ ಆಧಾರ್ ಪಡೆದರೂ ಈರೀತಿಯಲ್ಲಿ ನೋಟೀಸ್ ನೀಡಿರುವುದು ಯಾವ ಸೀಮೆ ನ್ಯಾಯ ಎಂದು ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ ಪ್ರಶ್ನಿಸಿದ್ದಾರೆ

ನೋಟೀಸ್ ಪಟ್ಟಿಯಲ್ಲಿ ದಲಿತರು ಮತ್ತು ಮುಸ್ಲಿಮರು…??      

 ನೋಟೀಸ್ ಜಾರಿಯಾಗಿರುವ ಪಟ್ಟಿಯನ್ನು ಸ್ಥೂಲವಾಗಿ ಗಮನಿಸಿದರೆ ಅದರಲ್ಲಿರುವ 127 ಜನರಲ್ಲಿ ಎಷ್ಟು ಮಂದಿ ಮುಸ್ಲಿಂ ಮತ್ತು ದಲಿತರು ಇದ್ದಾರೆ ಎಂದು ಹೇಳಲು ಆಧಾರ್ ಪ್ರಾಧಿಕಾರವನ್ನು ಎಐಐಎಂಐಎಂ ಮುಖ್ಯಸ್ಥರು ಆಗ್ರಹಿಸಿದ್ದಾರೆ.

   ಪ್ರಾಥಮಿಕ ತನಿಖೆಯ ವೇಳೆ ಹೈದರಾಬಾದ್‌ನಲ್ಲಿ 127 ಜನರು “ಆಧಾರ್ ಸಂಖ್ಯೆ ಪಡೆಯಲು ಅರ್ಹತೆ ಹೊಂದಿಲ್ಲದ ಅಕ್ರಮ ವಲಸಿಗರು” ಎಂದು ಆಧರ್ ಪ್ರಾಧಿಕಾರ ಇಂದು ಬೆಳಿಗ್ಗೆ ಮಾಡಿರುವ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದೆ. ಯುಐಡಿಎಐ ರಾಜ್ಯ ಪೊಲೀಸರಿಂದ ವರದಿಗಳನ್ನು ಪಡೆದ ನಂತರ ಮತ್ತು “ವೈಯಕ್ತಿಕ ವಿಚಾರಣೆಗೆ ಹಾಜರಾಗುವಂತೆ” ಕೇಳಿದ ನಂತರ ಅವರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.

    ಆರೋಪಿತರ ವಿಚಾರಣೆ ಬಳಿಕ  ಅವುಗಳಲ್ಲಿ ಯಾವುದಾದರೂ ಸುಳ್ಳು ದಾಖಲೆಗಳನ್ನು ಸಲ್ಲಿಸುವ ಮೂಲಕ ಆಧಾರ್ ಪಡೆದಿದ್ದರೆ ಅಂತಹವರ  ಆಧಾರ್ ಕಾರ್ಡ್ ಅನ್ನು  ತೀವ್ರತೆಗನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ತಿಳಿಸಿದೆ . ನೋಟಿಸ್‌ಗಳಿಗೆ “ಪೌರತ್ವಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಆಧಾರ್ ಸಂಖ್ಯೆಯನ್ನು ರದ್ದುಪಡಿಸುವುದು ಯಾವುದೇ ನಿವಾಸಿಗಳ ರಾಷ್ಟ್ರೀಯತೆಗೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ” ಎಂದು ಅದು ಹೇಳಿದೆ.

    ಇದಾದ ಕೆಲವೇ ಕೆಲವು ಗಂಟೆಗಳ ನಂತರ,ಟ್ವೀಟ್ ಮಾಡಿದ ಓವೈಸಿ ಅವರು ಆಧಾರ್ ಪ್ರಾಧಿಕಾರವು “ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ” ಮತ್ತು “ಸರಿಯಾದ ಕಾರ್ಯವಿಧಾನವನ್ನು ಅನುಸರಿಸಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆರು.

    “ನೋಟಿಸ್‌ನಲ್ಲಿ ಬಳಸಲಾದ ಪದಗಳು ತುಂಬಾ ಅತಿರೇಕದವುಗಳಾಗಿವೆ ಆದ್ದರಿಂದ ಈ ನೋಟಿಸ್ ನೀಡಿದ ಉಪ ನಿರ್ದೇಶಕರನ್ನು ,ಯುಐಡಿಎಐ ಅವರನ್ನು ತತಕ್ಷಣದಿಂದ ಕ್ರಮ ಕೈಗೊಳ್ಳಲು ಕೋರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap