ನವದೆಹಲಿ
ಏರ್ ಇಂಡಿಯಾ ವಿಮಾನದಲ್ಲಿ ಲೂಧಿಯಾನಕ್ಕೆ ಪ್ರಯಾಣಿಸಿದ್ದ ಸಿಬ್ಬಂದಿಗೆ ಕೊರೊನಾ ಸೋಂಕಿ ಇರುವುದು ಪತ್ತೆಯಾಗಿದೆ.ವಿಮಾನದಲ್ಲಿದ್ದ 40 ಮಂದಿ ಸಹ ಪ್ರಯಾಣಿಕರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಅದರಲ್ಲಿ 4 ಮಂದಿ ಕ್ರ್ಯೂ ಕೂಡ ಸೇರಿದ್ದಾರೆ.
ಪಂಜಾಬ್ ಸರ್ಕಾರದ ಮಾರ್ಗಸೂಚಿ ಪ್ರಕಾರ ಅವರನ್ನು ಇನ್‌ಸ್ಟಟ್ಯೂಷನಲ್ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಪ್ರಯಾಣಿಕ ಅಲಾಯನ್ಸ್ ಏರ್‌ನ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಟಿಕೆಟ್ ಪಡೆದು ಸಂಚರಿಸುತ್ತಿದ್ದರು.ಕೊರೊನಾ ಲಾಕ್‌ಡೌನ್ ಬಳಿಕ ದೇಶೀಯ ವಿಮಾನಗಳ ಹಾರಾಟ ಮೇ 25 ರಿಂದ ಆರಂಭಗೊಂಡಿತ್ತು. 26 ರಂದು ಪ್ರಯಾಣಿಕರೊಬ್ಬರಿಗೆ ಕೊರೊನಾ ಸೋಂಕು ಇರುವುದು ತಿಳಿದುಬಂದಿದೆ.