ಭಾರತದ ಕ್ರೆಡಿಟ್ ರೇಟಿಂಗ್ ಕುಸಿತ : ಮೂಡಿಸ್

ನವದೆಹಲಿ:

     ಪ್ರಧಾನಿ ಮೋದಿಯವರ ಕನಸಿನ 5ಟ್ರಿಲಿಯನ್ ಆರ್ಥಿಕತೆ,ಜಾಗತಿಕ ಮಾರುಕಟ್ಟೆ ಸ್ಥಾನಮಾನ ಹಾಗು ಇನ್ನಿತರೆ ಮ್ತ್ವಾಕಾಂಕ್ಷೆಗಳಿಗೆ ಜಾಗತಿಕ ಆರ್ಥಿಕ ಸೂಚಂಕ ನೀಡುವ ಮೂಡಿಸ್ ದೊಡ್ಡ ಷಾಕ್ ನೀಡಿದೆ ದೇಶದ ಕ್ರೆಡಿಟ್ ದರ ಋಣಾತ್ಮಕವಾಗಿದೆ ಎಂದು ತಿಳಿಸಿದೆ.

    ಕಳೆದ ಕೆಲ ತಿಂಗಳಿಂದಲ್ಲೂ ದೇಶ ಆರ್ಥಿಕವಾಗಿ ಪತನವಾಗುವ ಹಾದಿಯಲ್ಲಿ ಸಾಗುತ್ತಿದ್ದು ಅದರಿಂದ ಹೊರಬರುವ ಯಾವೊಂದು ಪ್ರಯತ್ನವನ್ನು ಮಾಡದಿರುವುದರಿಂದ ಮೂಡಿಸ್ ರೇಟಿಂಗ್ ಅನ್ನು ತಗ್ಗಿಸಿದೆ ಎಂದು ಹೇಳಲಾಗಿದೆ.

      ಅಮೆರಿಕ ಮೂಲದ ವಾಣಿಜ್ಯ ಮತ್ತು ಹಣಕಾಸು ಸೇವಾ ಸಂಸ್ಥೆಯಾದ ಮೂಡಿಸ್ ಕಾರ್ಪೊರೇಷನ್ ಹೊಸ ರೇಟಿಂಗ್ ಅನ್ನು ಬಿಡುಗಡೆ ಮಾಡಿದ್ದು, ಆರ್ಥಿಕ ದೌರ್ಬಲ್ಯವನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಇದು ದೇಶದ ಸಾಲದ ಹೊರೆಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದೆ.

     ಕಳೆದ ಏಪ್ರಿಲ್ ನಿಂದ ಜೂನ್ ವರೆಗೆ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇಕಡಾ 5 ರಷ್ಟು ಮಾತ್ರ ಹೆಚ್ಚಳವಾಗಿದೆ. 2013ರಿಂದ ಇದು ಅತ್ಯಂತ ಕಡಿಮೆ ಆರ್ಥಿಕ ಬೆಳವಣಿಗೆಯಾಗಿದೆ ಎಂದಿದೆಯಲ್ಲದೇ ಜಾಗತಿಕ ವ್ಯಾಪಾರ ಸಂಘರ್ಷದ ಮಧ್ಯೆ ಗ್ರಾಹಕರ ಬೇಡಿಕೆ ಮತ್ತು ಸರ್ಕಾರದ ವೆಚ್ಚ ಕಡಿಮೆಯಾಗಿದೆ ಎಂದು ಹೇಳಿದೆ.ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಈಗಾಗಲೇ ಹಲವು ಸಂಸ್ಥೆಗಳು ಭಾರತದ ಆರ್ಥಿಕತೆ ತೀವ್ರ ಸಂಕಷ್ಟದಲ್ಲಿದೆ ಎಂದು ಹೇಳಿಕೊಂಡು ಬರುತ್ತಲೇ ಇದೆ. ಇದೀಗ ಮೂಡಿಯ ವರದಿಯಲ್ಲಿ Baa3 ನಿಂದ Baa2ಗೆ ಭಾರತವನ್ನು ಇಳಿಸಿರುವುದು ಅದಕ್ಕೆ ಇಂಬು ನೀಡುವಂತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap