ನವದೆಹಲಿ
ಭಾರತದಿಂದ ವಿದೇಶಕ್ಕೆ ಹಣವನ್ನು ವರ್ಗಾವಣೆ ಮಾಡುವವರು ತುರ್ತಾಗಿ ಗಮನಿಸಬೇಕಾದ ಸಂಗತಿ ಇದು. ಮುಂದಿನ ತಿಂಗಳು, ಅಕ್ಟೋಬರ್ 1ನೇ ತಾರೀಕಿನಿಂದ ವಿದೇಶಕ್ಕೆ ಭಾರತದಿಂದ ವರ್ಗಾವಣೆ ಆಗುವ ಹಣಕ್ಕೆ ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್ (ಟಿಸಿಎಸ್) ಬೀಳುತ್ತದೆ. ಹಣಕಾಸು ಕಾಯ್ದೆ 2020ರ ಪ್ರಕಾರ, ವಿದೇಶಕ್ಕೆ ಕಳುಹಿಸುವ ಮೊತ್ತದಲ್ಲಿ 5% ಟಿಸಿಎಸ್ ಕಡಿತ ಆಗುತ್ತದೆ.
ಇನ್ನು ಎಲ್ಲ ವಿದೇಶಿ ಹಣ ವರ್ಗಾವಣೆಗೂ ಇದು ಅನ್ವಯ ಆಗುತ್ತದೆ ಎಂದಲ್ಲ. 7 ಲಕ್ಷಕ್ಕಿಂತ ಕಡಿಮೆ ಅವಧಿಗೆ ಹಾಗೂ ಟೂರ್ ಪ್ಯಾಕೇಜ್ ಖರೀದಿಗೆ ಅನ್ವಯ ಆಗಲ್ಲ. ಟೂರ್ ಪ್ಯಾಕೇಜ್ ಅಲ್ಲದಿದ್ದಲ್ಲಿ, ಏಳು ಲಕ್ಷ ಮೇಲ್ಪಟ್ಟ ಮೊತ್ತದ ಪಾವತಿಗೆ ಟಿಸಿಎಸ್ ಅನ್ವಯ ಆಗುತ್ತದೆ.
ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು, ಶೈಕ್ಷಣಿಕ ಸಾಲ ಪಡೆದವರಿಗೆ ಹಣಕಾಸು ಸಂಸ್ಥೆಗಳಿಂದ ಏಳು ಲಕ್ಷ ಮೇಲ್ಪಟ್ಟು ಮೊತ್ತ ವರ್ಗಾವಣೆ ಮಾಡುವಾಗ 0.5% ನಿಗದಿ ಮಾಡಲಾಗಿದೆ. ಇನ್ನು ಈಗಾಗಲೇ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟಡ್ ಅಟ್ ಸೋರ್ಸ್) ಆಗಿರುವವರಿಗೆ ಈ ಟಿಸಿಎಸ್ ಅನ್ವಯ ಆಗಲ್ಲ.ಈ ವರ್ಷದ ಮಾರ್ಚ್ 27ನೇ ತಾರೀಕಿನಂದು ಹಣಕಾಸು ಕಾಯ್ದೆ ಅಧಿಸೂಚನೆ ಹೊರಡಿಸಲಾಗಿತ್ತು. ಈ ನಿಯಮಗಳು ಅಕ್ಟೋಬರ್ 1ನೇ ತಾರೀಕಿನಿಂದ ಅನ್ವಯ ಆಗುತ್ತದೆ. ಗ್ರಾಹಕರು ಈ ಟಿಸಿಎಸ್ ಭರಿಸಬೇಕಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ