ಮುಂಬೈ:
ಹಳ್ಳಿಗಳಲ್ಲಿ ಮದುವೆಗು ಮುನ್ನ ವಧುವಿನ ಕನ್ಯತ್ವ ಪರೀಕ್ಷೆ ಮಾಡಿಸುವುದು ಶಿಕ್ಷಾರ್ಹ ಅಪರಾಧ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ಕೆಲ ಸಮುದಾಯಗಳಲ್ಲಿ ಹೊಸದಾಗಿ ಮದುವೆಯಾಗುವ ವಧು ತಾನು ಮದುವೆಗೆ ಮುನ್ನ ತಾನು ಕನ್ಯೆ ಎಂದು ಸಾಬೀತುಪಡಿಸುವ ಆಚರಣೆಗಳನ್ನು ಪಾಲಿಸಲಾಗುತ್ತಿದೆ.
ಕೆಲವು ಸಂಘ ಸಂಸ್ಥೆಗಳ ನಿಯೋಗ ಇಂದು ಗೃಹ ಸಚಿವ ರಂಜೀತ್ ಪಾಟಿಲ್ ಅವರನ್ನು ಭೇಟಿಯಾಗಿದ್ದು ಈ ಮೇಲಿನ ವಿಷಯದ ಬಗ್ಗೆ ಚರ್ಚೆ ನಡೆಸಿಲಾಗಿತ್ತು ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಸಚಿವರು ಈ ವಿಷಯ ಸಂಬಂಧ ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಜೊತೆ ಸಮಾಲೋಚನೆಯ ನಂತರ ಕನ್ಯತ್ವ ಪರೀಕ್ಷೆಯನ್ನು ಲೈಂಗಿಕ ದೌರ್ಜನ್ಯದ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಕನ್ಯತ್ವ ಪರೀಕ್ಷೆಯು ಶಿಕ್ಷಾರ್ಹ ಅಪರಾಧ ಎಂದು ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.