ಸ್ವಚ್ಚ ಭಾರತಕ್ಕೆ ಕೈ ಜೋಡಿಸಿದ ಪುದುಚೇರಿ ಸಿಎಂ

ಪುದುಚೇರಿ: 

ಪುದುಚೇರಿಯ ಮುಖ್ಯಮಂತ್ರಿಗಳಾದ ಶ್ರೀ ವಿ.ನಾರಾಯಣಸ್ವಾಮಿ ಅವರು ಇಂದು ಬೆಳಿಗ್ಗೆ ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಚ ಭಾರತ ಅಭಿಯಾನದ ಭಾಗವಾಗಿ ತಾವೆ ಸ್ವತಹ ಸಲಾಕೆ ಹಿಡಿದು ಚರಂಡಿಗಿಳಿದು ಸ್ಛಚ್ಛತೆ ಮಾಡಿರುವುದು ಈಗ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ  .

     ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತದ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಪುದುಚೇರಿ ಸಿಎಂ ನಾರಾಯಣಸ್ವಾಮಿ ಸಾಥ್​ ನೀಡಿದರು. ಚರಂಡಿ ಸ್ವಚ್ಛಗೊಳಿಸಿರುವ ವಿಡಿಯೊವನ್ನು ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೊದಲ್ಲಿ ಸಿಎಂ ಅವರು ಬಿಳಿ ವಸ್ತ್ರ ಧರಿಸಿದ್ದು, ಪಂಚೆಯನ್ನು ಮೇಲಕ್ಕೆ ಎತ್ತಿಕಟ್ಟಿ ಕೈಗೆ ಗ್ಲೌಸ್ ಹಾಕಿರುವ ಸಿಎಂ ಸಲಾಕೆ ಹಿಡಿದು ಚರಂಡಿ ಸ್ವಚ್ಛಗೊಳಿಸಿದ್ದಾರೆ. ಅವರ ಈ ಕಾರ್ಯಕ್ಕೆ ಬೆಂಬಲಿಗರು ಸಾಥ್​ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link