ನವದೆಹಲಿ:
ದೇಶದ ಧಿಮಂತ ಪ್ರಧಾನಿ ಇಂದಿರಾ ಪ್ರಿಯದರ್ಶಿನಿ ಸಾವಿನ ಬಳಿಕ ನಡೆದಿದ್ದ ಸಿಖ್ ನರಮೇಧ ಪ್ರಕರಣ ಸಂಬಂಧ ನಿನ್ನೆ ವಿಚಾರಣೆ ಕೈಗೆತ್ತಿಕೊಂಡಂತಹ ದೆಹಲಿ ಹೈಕೋರ್ಟ್ ಜನ ಮೆಚ್ಚುವ ತೀರ್ಪು ನೀಡಿದ್ದು, ನರಮೇಧ ಪ್ರಕರಣದ ಕಳಂಕಿತ ಕಾಂಗ್ರೆಸ್ ಮುಖಂಡನ ಪಾಲಿಗೆ ಇಂದು ಕರಾಳ ಮಂಗಳವಾರ ಎಂದೆನಿಸುತ್ತದೆ ಇಷ್ಟು ದಿನ ಬಿಡುಗಡೆ ಸಿಕ್ಕ ಹಕ್ಕಿಯಂತಿದ್ದ ಆತ ಇನ್ನು ಸುಮಾರು 14 ವರ್ಷ ಜೈಲಿನಲ್ಲಿ ಕಳೆಯ ಬೇಕಾಗಿದೆ .
ಕಾಂಗ್ರೇಸ್ ಕಟ್ಟಾಳು ಶ್ರೀ ಸಜ್ಜನ್ ಕುಮಾರ್ ಅವರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡುವ ಮೂಲಕ ಸಿಖರ ಹಿತ ಕಾಪಾಡಿದೆ ಎಂದು ತಿಳಿಸಲಾಗಿದೆ. ದೆಹಲಿ ಕಂಟೋನ್ ಮೆಂಟ್ ಏರಿಯಾದಲ್ಲಿ ನಡೆದ ಸಿಖ್ ಜನಾಂಗದ ನರಮೇಧದ ಪ್ರಮುಖ ಆರೋಪಿ ಮತ್ತು ಸೂತ್ರಧಾರ ಸಜ್ಜನ್ ನನ್ನು ಜೀವಿತಾವಧಿಯ ಕೈದಿ ಎಂದು ಪರಿಗಣಿಸಿ ಆದೇಶ ಹೋರಡಿಸಿದೆ . ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎಸ್ ಮುರಳೀಧರ್ ಹಾಗೂ ನ್ಯಾ. ವಿನೋದ್ ಗೋಯಲ್ ಅವರ ಪೀಠ ಇಂದು ತೀರ್ಪು ಪ್ರಕಟಿಸಿದೆ.