ದೆಹಲಿ:

ಅಂತರಾಷ್ಟ್ರೀಯ ಸಾರಿಗೆ ವ್ಯವಸ್ತೆಗಳಲ್ಲಿ ಒಂದಾದ ವಿಮಾನಯಾನದಲ್ಲಿ ಅದಕ್ಕೆ ಆದ ಕೆಲವು ನಿಯಮ ನಿಭಂಧನೆಗಳು ಇರುತ್ತವೆ ಅದನ್ನು ಮೀರಿದರೆ ಎಂತಹವರಿಗೂ ಕ್ಷಮೆಯೆನ್ನುವುದೇ ಇಲ್ಲಾ ಅಂತಹುದರಲ್ಲಿ ದೆಹಲಿಯಿಂದ ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ ಈ ಕಾರಣದಿಂದಾಗಿ ವಿಮಾನವು ಸುಮಾರು ಆರು ಗಂಟೆ ತಡವಾಗಿ ಟೇಕ್ ಆಫ್ ಆಗಬೇಕಾಗದ ಘಟನೆ ಭಾನುವಾರ ನಡೆದಿದೆ.

ಕುಡಿದು ವಿಮಾನ ಚಲಾಯಿಸಲು ಬಂದ ಅರವಿಂದ್ ಅವರನ್ನು ಕರ್ತವ್ಯ ನಿರ್ವಹಿಸಲು ತೆರಳುವ ಮೊದಲು ವೈದ್ಯಾಧಿಕಾರಿ ಉಸಿರು ಪರೀಕ್ಷೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎಂದು ದೆಹಲಿ ವಿಮಾನ ನಿಲ್ದಾಣ ಅಧಿಕೃತವಾಗಿ ಪ್ರಕಟಿಸಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
