ಇಸ್ರೋದ ವಿಜ್ಞಾನಿ, ಇಂಜಿನಿಯರ್ಸ್​​ಗೆ ಶುಭಕೋರಿದ ಕುಮಾರಸ್ವಾಮಿ

ಬೆಂಗಳೂರು

    ದೇಶಾದ್ಯಂತ ಶುಕ್ರವಾರ ರಾಷ್ಟ್ರೀಯ ಬಾಹ್ಯಾಕಾಶ ದಿನಾಚಾರಣೆ   ಆಚರಿಸಲಾಗುತ್ತಿದೆ. ಕಳೆದ ವರ್ಷ ಆಗಸ್ಟ್​ 23ರಂದು ಭಾರತ ಮಹತ್ವಾಕಾಂಕ್ಷಿ ಚಂದ್ರಯಾನ-3   ಯೋಜನೆಯ ವಿಕ್ರಂ ಲ್ಯಾಂಡರ್ ಅನ್ನು​ ಚಂದ್ರನ ದಕ್ಷಿಣ ಧ್ರುವದಲ್ಲಿನ “ಶಿವ ಶಕ್ತಿ” ಬಿಂದುವಿನಲ್ಲಿ ಇಳಿದ ದಿನವನ್ನು ಸ್ಮರಿಸಲೆಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಆಚರಿಸಲಾಗುತ್ತಿದೆ. ಬ್ಯಾಹಾಕಾಶ ಕ್ಷೇತ್ರದಲ್ಲಿ ಭಾರತದ ಹೆಸರನ್ನು ಅಜರಾಮರವಾಗಿಸಲು ಹಗಲಿರುಳು ಶ್ರಮಿಸುತ್ತಿರಿವ ಇಸ್ರೋದ ವಿಜ್ಞಾನಿಗಳಿಗೆ ಮತ್ತು ಅಭಿಯಂತ್ರರಿಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ   ಅವರು ಶುಭಾಶಯ ತಿಳಿಸಿದ್ದಾರೆ.

    ಮೊದಲ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಟ್ವೀಟ್​ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರ   ಕರೆ ಮೇರೆಗೆ ಇಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಆಚರಿಸಲಾಗುತ್ತಿದೆ. ಚಂದ್ರಯಾನ-3 ಯೋಜನೆಯ ವಿಕ್ರಂ ಲ್ಯಾಂಡರ್ ಅನ್ನು​​​ ಚಂದ್ರನ ದಕ್ಷಿಣ ಧ್ರುವದಲ್ಲಿನ ಯಶಸ್ವಿಯಾಗಿ ಇಳಿಸಿದ ನೆನಪಿಗಾಗಿ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಆಚರಿಸಲಾಗುತ್ತಿದೆ. ಈ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದು, ನಾಯಕನಾಗಿ ಹೊರಹೊಮ್ಮಿದೆ ಎಂದು ಹೇಳಿದರು.

    ಚಂದ್ರಯಾನ-3 ಯೋಜನೆ ಯಶಸ್ವಿ ಹಿಂದೆ ಬಹೃತ್​ ಕೈಗಾರಿಕಾ ಸಚಿವಾಲಯದ ಬಹು ದೊಡ್ಡ ಕೊಡುಗೆಯೂ ಇದೆ. MHI-ಇನ್‌ಸ್ಟ್ರುಮೆಂಟೇಶನ್ ಲಿಮಿಟೆಡ್ ,  ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ , ಮತ್ತು ಹಿಂದೂಸ್ತಾನ್ ಮೆಷಿನ್ ಟೂಲ್ಸ್  ಅಡಿಯಲ್ಲಿ ನಾಲ್ಕು CPSE ಗಳು ಚಂದ್ರಯಾನ-3 ರ ಯಶಸ್ಸಿಗೆ ಉತ್ಪನ್ನಗಳನ್ನು ಪೂರೈಸಿದವು ಎಂದು ತಿಳಿಸಿದರು. ಈ ಆಚರಣೆಯು ಇಸ್ರೋದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಸಮರ್ಪಣೆ. ಮತ್ತು ನಮ್ಮ ರಾಷ್ಟ್ರದ ಕೈಗಾರಿಕೆಗಳ ಸಹಯೋಗದ ಪ್ರಯತ್ನಗಳಿಗೆ ಚಂದ್ರಯಾನ-3 ಸಾಕ್ಷಿಯಾಗಿದೆ ಎಂದರು.

Recent Articles

spot_img

Related Stories

Share via
Copy link