ಮಧ್ಯ ಪ್ರದೇಶ
ಬಿಜೆಪಿ ವಿವಾದಾತ್ಮಕ ಸಂಸದೆ ಎಂದೇ ಖ್ಯಾತರಾಆಗಿರುವ ಪ್ರಗ್ಯಾ ಸಿಂಗ್ ಠಾಕೂರ್ ಅವರು ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳೀದು ಬಂದಿದೆ
ಅವರು ಕಾಯ್ದಿರಿಸಿದ್ದ ಸೀಟನ್ನು ನೀಡಲಿಲ್ಲ, ವಿಮಾನದ ಸಿಬ್ಬಂದಿಯ ಅವರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ಭೋಪಾಲ್ ವಿಮಾನ ನಿಲ್ದಾಣ ನಿರ್ದೇಶಕರಿಗೆ ದೂರು ನೀಡಿದ್ದಾರೆ.
ವಿಮಾನ ಪ್ರಯಾಣದ ವೇಳೆ ತಮಗಾದ ತೊಂದರೆ ಬಗ್ಗೆ ನಿನ್ನೆ ಅವರು ದೂರು ಸಲ್ಲಿಸಿದ್ದು, ಸ್ಪೈಸ್ ಜೆಟ್ ಸಿಬ್ಬಂದಿಯ ವರ್ತನೆ ಸರಿಯಾಗಿರಲಿಲ್ಲ, ಈ ಹಿಂದೊಮ್ಮೆ ಕೂಡ ತಮಗೆ ಈ ರೀತಿಯಾಗಿತ್ತು, ತಾವು ಕಾಯ್ದಿರಿಸಿದ ಸೀಟು ಸಿಕ್ಕಿರಲಿಲ್ಲ ಎಂದು ಪ್ರಗ್ಯಾ ಠಾಕೂರ್ ತಿಳಿಸಿದ್ದಾರೆ.
ವಿಮಾನ ನಿಲ್ದಾಣ ನಿರ್ದೇಶಕರ ಬಳಿ ಹೋಗಿ ಈ ಸಂಬಂಧ ಲಿಖಿತ ದೂರು ನೀಡಿದ್ದೇನೆ, ರೈಲು,ವಿಮಾನಗಳಿರುವುದು ಜನರ ಸೌಕರ್ಯಕ್ಕೆ, ಸಾರ್ವಜನಿಕ ಪ್ರತಿನಿಧಿಗಳಾಗಿ ಸಾಮಾನ್ಯ ಜನರಿಗೆ ಸಿಗಬೇಕಾದ ಸೌಕರ್ಯಗಳನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ, ಸಾಮಾನ್ಯ ಜನರಿಗೂ ಈ ರೀತಿ ಆಗಬಾರದು, ಹೀಗಾಗಿ ದೂರು ನೀಡಿದೆ ಎಂದರು.
ಈ ಸಂಬಂಧ ದೂರು ಸ್ವೀಕರಿಸಿದ್ದು ತನಿಖೆ ನಡೆಸಲಾಗುವುದು, ಸ್ಪೈಸ್ ಜೆಟ್ ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗುವುದು ಎಂದು ಭೋಪಾಲ್ ವಿಮಾನ ನಿಲ್ದಾಣ ನಿರ್ದೇಶಕ ಅನಿಲ್ ವಿಕ್ರಮ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
