ನವದೆಹಲಿ:
ಕೊರೋನಾ ವೈರಸ್ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಲಾಕ್’ಡೌನ್ ನಿಂದ ವೈರಸ್’ನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ, ಕೇವಲ ಹರಡುವಿಕೆ ನಿಯಂತ್ರಿಸಬಹುದಷ್ಟೇ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ದೇಶದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ವಿಡಿಯೋ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಲಾಕ್’ಡೌನ್ ಸಮಸ್ಯೆಗೆ ಯಾವುದೇ ರೀತಿಯ ಶಾಶ್ವತ ಪರಿಹಾರವಿಲ್ಲ. ಇದೊಂದು ವಿರಾಮದ ಬಟನ್ ಆಗಿದೆಯಷ್ಟೇ. ಲಾಕ್’ಡೌನ್ ನಿಂದ ಹೊರಬರುತ್ತಿದ್ದಂತೆಯೇ ಮತ್ತೆ ವೈರಸ್ ಹರಡಲು ಆರಂಭಿಸುತ್ತದೆ ಎಂದು ತಿಳಿಸಿದ್ದಾರೆ.
ಈಗಾಗಲೇ ನಾವು ಸಂಕಷ್ಟದ ಹಂತ ತಲುಪಿ ಬಿಟ್ಟಿದ್ದೇವೆ. ಇದೀಗ ನಾನು ತುರ್ತುಪರಿಸ್ಥಿಯಲ್ಲಿದ್ದೇವೆ. ವೈರಸ್ ವಿರುದ್ಧ ಹೋರಾಟಲು ಭಾರತ ಒಗ್ಗೂಡಬೇಕಿದೆ. ಮೊಂಡು ಸಲಕರಣೆಗಳ ಬಳಸದಂತೆ ಸಲಹೆ ನೀಡಲು ಇಚ್ಛಿಸುತ್ತೇನೆ. ತಂತ್ರಗಳ ಮೂಲಕ ನಾವು ಕೆಲಸ ಮಾಡಬೇಕಿದೆ. ಲಾಕ್’ಡೌನ್ ಸಮಸ್ಯೆಯನ್ನು ದೂರಾಗಿಸುವುದಿಲ್ಲ. ಕೇವಲ ಸಮಸ್ಯೆಯನ್ನು ಮುಂದೂಡುತ್ತದೆಯಷ್ಟೇ. ಕೊರೋನಾ ವಿರುದ್ಧ ಹೋರಾಡಲು ನಾವು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕೆಲಸ ಕೆಲಸ ಮಾಡಬೇಕಿದೆ. ಕೇರಳದ ವಯಾನಾಡಿನಲ್ಲಿ ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಯಶಸ್ಸು ಸಾಧಿಸಲಾಗುತ್ತಿದೆ.
ಪರೀಕ್ಷೆಗಳನ್ನು ಆಕ್ರಮಣಕಾರಿ ರೀತಿಯಲ್ಲಿ ನಡೆಸಬೇಕಿದೆ. ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ರಾಜ್ಯಗಳಿಗೆ ಸಹಾಯ ಮಾಡಿ. ಕೇವಲ ರೋಗಿಯನ್ನಷ್ಟೇ ಪತ್ತೆಹಚ್ಚುವುದಲ್ಲ, ಭಾರತದ ನಕ್ಷೆ ಸಿದ್ಧಪಡಿಸಿ ವೈರಸ್ ಎಲ್ಲೆಲ್ಲಿ ಹರಡುತ್ತಿದೆ ಎಂಬುದನ್ನು ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ.