ಜೂನ್ 30ರವರೆಗೆ ಲಾಕ್ ಡೌನ್ ವಿಸ್ತರಣೆ..!

ಜೂ8ರಿಂದ ಮಾಲ್ ಹೋಟೆಲ್ ತೆರೆಯಲು ಅನುಮತಿ 

ನವದೆಹಲಿ:

        ಕೊರೋನಾ ವೈರಸ್ ಹರಡುವುದನ್ನು ತಡೆಯುವ ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ಅನ್ನು ಜೂನ್ 30ರ ವರೆಗೆ ವಿಸ್ತರಿಸಿದೆ. ಲಾಕ್ ಡೌನ್ 5.0 ಕಂಟೇನ್ ಮೆಂಟ್ ಜೋನ್ ಗೆ ಮಾತ್ರ ಸೀಮಿತವಾಗಿದ್ದು, ಇತರೆ ಪ್ರದೇಶಗಳಿಗೆ ಮತ್ತಷ್ಟು ವಿನಾಯಿತಿಗಳನ್ನು ನೀಡಿದೆ. 

ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಮೊದಲನೇ ಹಂತದಲ್ಲಿ ಧಾರ್ಮಿಕ ಕೇಂದ್ರಗಳು, ದೇವಸ್ಥಾನಗಳು, ಮಾಲ್, ಹೋಟೆಲ್ ಆರಂಭಿಸಲು ಜೂನ್ 8ರಿಂದ ಅನುಮತಿ ನೀಡಬಹುದಾಗಿದೆ.

ಎರಡನೇ ಹಂತದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಚರ್ಚಿಸಿದ ನಂತರ ಶಾಲಾ-ಕಾಲೇಜ್, ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಸಂಸ್ಥೆಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಕೇಂದ್ರ ತಿಳಿಸಿದೆ.

ಮೂರನೇ ಹಂತದಲ್ಲಿ ಅಂತರರಾಷ್ಟ್ರೀಯ ವಿಮಾನ ಸಂಚಾರ, ಮೆಟ್ರೋ ರೈಲಿನ ಕಾರ್ಯಾಚರಣೆ, ಸಿನೆಮಾ ಹಾಲ್‌ಗಳು, ಜಿಮ್, ಈಜುಕೊಳಗಳು, ಇತರೆ ಮನರಂಜನಾ ಸ್ಥಳಗಳನ್ನು ತೆರೆಯುವ ದಿನಾಂಕದ ಬಗ್ಗೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸಲಾಗುತ್ತದೆ ಎಂದು ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap