ಕೊನೆಯಾಗುತ್ತಾ ಯುದ್ದ.? NATO ಸದಸ್ಯತ್ವ ನಿರಾಕರಿಸಿ ರಷ್ಯಾ ಜೊತೆ ರಾಜಿ ಇಂಗಿತ ವ್ಯಕ್ತಪಡಿಸಿದ ಉಕ್ರೇನ್​ ಅಧ್ಯಕ್ಷ..!

ಉಕ್ರೇನ್​:

ರಷ್ಯಾದ ವೈಮಾನಿಕ ದಾಳಿಗಳು ಹಾಗೂ ಫಿರಂಗಿ ದಾಳಿಗಳಿಂದ ಉಕ್ರೇನ್​ ಸಂಪೂರ್ಣವಾಗಿ ನಲುಗಿ ಹೋಗಿದೆ.ಕೀವ್​ನಲ್ಲಿ ರಷ್ಯಾದ ದಾಳಿಯು ಮುಂದುವರಿದಿದ್ದು, ಸಾಕಷ್ಟು ಕಟ್ಟಡಗಳು ನೆಲಸಮವಾಗಿದೆ.ಪಶ್ಚಿಮ ಭಾಗದಲ್ಲಿ ತನ್ನ ಹಿಡಿತವನ್ನು ಸಾಧಿಸಿರುವ ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲನ್ಸ್ಕಿ ರಷ್ಯಾದ ಸೇನೆಗೆ ಶರಣಾಗುವಂತೆ ಹೇಳಿದ್ದರು.

 ನೀವು ಉಕ್ರೇನ್​ನಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ. ನೀವು ಜೀವ ತೆಗೆಯಬಹುದು. ಆದರೆ ನೀವೇಕೆ ಸಾಯಬೇಕು ? ಯಾವುದಕ್ಕಾಗಿ ಸಾಯಬೇಕು..? ನೀವೆಲ್ಲ ಬದುಕಲು ಇಚ್ಛಿಸುತ್ತೀರಿ ಎಂಬುದು ನನಗೆ ತಿಳಿದಿದೆ ಎಂದು ಹೇಳಿದ್ದರು.

ಅಲ್ಲದೇ ಮಾಸ್ಕೋವನ್ನು ಕೆರಳಿಸಿರುವ ನ್ಯಾಟೋ ಸದಸ್ಯತ್ವದ ವಿಚಾರದಲ್ಲಿ ಕೀವ್​ ರಾಜಿ ಮಾಡಿಕೊಳ್ಳಲು ತಯಾರಿದೆ ಎಂಬರ್ಥದಲ್ಲಿ ವೊಲೊಡಿಮಿರ್​ ಮಾತನಾಡಿದ್ದಾರೆ. ನಾವು ತೆರೆದ ಬಾಗಿಲುಗಳ ಮೂಲಕ ಪ್ರವೇಶಿಸಲು ಸಾಧ್ಯವಾಗದೇ ಇದ್ದರೆ, ನಾವು ಸಂಘಗಳೊಂದಿಗೆ ಸಹಕರಿಸಬೇಕಾಗುತ್ತದೆ. ಅವು ನಮಗೆ ಸಹಾಯ ಮಾಡುತ್ತವೆ. ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದ್ದಾರೆ.

ಕೀವ್​​ನ ಮೇಲೆ ರಷ್ಯಾ ಕಳೆದ 20 ದಿನಗಳಿಂದ ದಾಳಿ ನಡೆಸುತ್ತಾ ಬಂದಿದ್ದು ಬಾಂಬ್​ ಸ್ಪೋಟದಲ್ಲಿ ಕನಿಷ್ಟ 5 ಮಂದಿ ಸಾವನ್ನಪ್ಪಿದ್ದಾರೆ. ಕಟ್ಟಡಗಳನ್ನು ಸ್ಪೋಟಿಸಲಾಗಿದೆ. ಅವಶೇಷಗಳಡಿ ಜನರು ಸಿಲುಕಿದ್ದಾರೆ ಎಂದು ಉಕ್ರೇನ್​ ಅಧಿಕಾರಿಗಳು ಹೇಳಿದ್ದಾರೆ .

ಇದರ ಮಧ್ಯೆ ಅಮೆರಿಕಾ ಸೇರಿದಂತೆ ಐರೋಪ್ಯ ರಾಷ್ಟ್ರಗಳು ಯುದ್ದವನ್ನು ಕೊನೆಗಾಣಿಸುವಂತೆ ರಷ್ಯಾ ಮೇಲೆ ಒತ್ತಡ ಹೇರುತ್ತಿವೆ. ಅಲ್ಲದೇ ರಷ್ಯಾ ವಿರುದ್ದ ಹಲವು ನಿರ್ಬಂಧಗಳನ್ನು ಹೇರುತ್ತಿದ್ದು, ಇಷ್ಟಾದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಮಣಿಯುತ್ತಿಲ್ಲ.

ಪೋಲೆಂಡ್ ಪ್ರಧಾನಿ, ಝೆಕ್‌ ಗಣರಾಜ್ಯದ ಪ್ರಧಾನಿ ಹಾಗೂ ಸ್ಲೋವೇನಿಯಾ ಪ್ರಧಾನಿ ಮಾತುಕತೆಗಾಗಿ ರೈಲಿನ ಮೂಲಕ ಕೀವ್‌ ಗೆ ತೆರಳಿದ್ದು, ಯುದ್ದ ಕೊನೆಗೊಳ್ಳಬಹುದೆಂಬ ಆಶಾಭಾವನೆ ಮೂಡಲು ಕಾರಣವಾಗಿದೆ.

ಜೊತೆಗೆ ಉಕ್ರೇನ್‌ ಅಧ್ಯಕ್ಷರು ಸಹ ಯುದ್ದದಿಂದಾಗುವ ಸಾವು – ನೋವುಗಳಿಗೆ ಅಂತ್ಯ ಹಾಡಬೇಕೆಂಬ ಮಾತುಗಳನ್ನಾಡುತ್ತಿರುವುದರಿಂದ ಯುದ್ದ ಅಂತ್ಯವಾಗಬಹುದು ಎಂಬ ಮಾತುಗಳಿಗೆ ಕಾರಣವಾಗಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap