ಪ್ರಯಾಗ್ ರಾಜ್
ದೇಶದಲ್ಲಿ ಮಕ್ಕಳ ಹೆಸರನ್ನು ಬದಲಾಯಿಸುವುದನ್ನು ಕೇಳಿದ್ದೇವೆ ಆದರೆ ಉತ್ತರಪ್ರದೇಶದ ಮುಖ್ಯಮಂತ್ರಿ ತಮ್ಮ ರಾಜ್ಯದ ಪ್ರಮುಖ ನಗರಗಳಲ್ಲಿ ಒಂದಾದ ಅಲಹಾಬಾದ್ ಅನ್ನು ಇಂದಿನಿಂದ ‘ಪ್ರಯಾಗ್‌ರಾಜ್’ ಎಂದು ಮರು ನಾಮಕರಣ ಮಾಡಿದ್ದಾರೆ . ನಗರಕ್ಕೆ ಶೀಘ್ರವೇ ‘ಪ್ರಯಾಗ್‌ರಾಜ್’ ಎಂದು ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೊನ್ನೆ ಶನಿವಾರ ಪ್ರಕಟಿಸಿದ್ದರು. ಅದರಂತೆ ಹೆಸರು ಬದಲಾವಣೆ ಇಂದಿನಿಂದ ಜಾರಿಗೆ ಬಂದಿದೆ.
ನೂತನ ಹೆಸರು ಇಂದಿನಿಂದ ಜಾರಿಗೆ ಬಂದಿರುವುದಾಗಿ ರಾಜ್ಯದ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
Allahabad to be called Prayagraj from today: Uttar Pradesh Minister Siddharth Nath Singh in Lucknow pic.twitter.com/lo021n8rKP
— ANI UP (@ANINewsUP) October 16, 2018
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
