ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೂರು ಸಾವಿರಕ್ಕೂ ಹೆಚ್ಚು ನೌಕರರಿಂದ ಪ್ರತಿಭಟನೆ

ಬೆಂಗಳೂರು :

   ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದಿಂದ ಎರಡು ದಿನಗಳ ಕಾಲ ಸರ್ಕಾರ ವಿರುಧ್ಧ ಪ್ರತಿಭಟನೆ ನಡೆಯುತ್ತಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೂರು ಸಾವಿರಕ್ಕೂ ಹೆಚ್ಚು ನೌಕರರಿಂದ ಪ್ರತಿಭಟನೆ ಮಾಡುತ್ತಿದ್ದಾರೆ.ಸಮಾಜ ಕಲ್ಯಾಣ ಇಲಾಖೆಯ ಅಧೀನದ ಕ್ರೈಸ್ ವಸತಿ ಶಾಲೆಗಳ ಖಾಯಂ ಶಿಕ್ಷಕರು/ನೌಕರರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಈ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಮಾಡಿದ್ದಾರೆ ನೌಕರರು.

1. ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಅಥವಾ ಎಸ್.ಸಿ, ಎಸ್.ಟಿ, ಬಿ.ಸಿ ವಸತಿ ಶಾಲೆಗಳನ್ನು ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡುವುದು.

2. ನಗದು ರಹಿತ ಚಿಕಿತ್ಸೆಗಾಗಿ ಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸುವುದು.

3. ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ಒದಗಿಸುವುದು.

4. ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ ನೀಡುವುದು.

5. ಹೆಚ್ಚುವರಿ ಕಾರ್ಯಾಭಾರ ಇರುವುದರಿಂದ 10% ವಿಶೇಷ ಭತ್ಯೆ ಮಂಜೂರಾತಿ.

   ಒಂದು ವೇಳೆ ಬೇಡಿಕೆ ಈಡೇರಿಲ್ಲ ಅಂದರೆ ದಿ:28.05.2025 ರೊಳಗೆ ನಮ್ಮ ಈ ಬೇಡಿಕೆಗಳು ಈಡೇರದಿದ್ದರೆ ಈ ಕೆಳಕಂಡಂತೆ ಜಿಲ್ಲಾ ಹಂತದಲ್ಲಿ ಸತ್ಯಾಗ್ರಹವನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

1. ದಿ:29.05.2025 ರಂದು ವಸತಿ ಶಾಲೆಯಲ್ಲಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವುದು.

2. ದಿ:30.05.2025 ರಂದು ತರಗತಿಗಳ ಬಹಿಷ್ಕಾರ ಮಾಡಿ ಅಸಹಕಾರ ವ್ಯಕ್ತಪಡಿಸುವುದು.

3. ದಿ:31.05.2025 ರಂದು ಪಾದಯಾತ್ರೆ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದು.

4. ದಿ:02.06.2025 ರಿಂದ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಅಥವಾ ವಸತಿ ಶಾಲೆಗಳ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದು 

   ಪ್ರತಿಭಟನೆಯಲ್ಲಿ ಗೌರವಾಧ್ಯಕ್ಷರು ಮಹೇಶ್ ಚಂದ್ರು, ಅಧ್ಯಕ್ಷರೂ ರವಿಚಂದ್ರ, ಉಪಾಧ್ಯಕ್ಷರು ಲಕ್ಷ್ಮಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನಟರಾಜ್, ಗೌರವಾಧ್ಯಕ್ಷರು ಮಹೇಶ್ ಚಂದ್ರು, ಉಪಾಧ್ಯಕ್ಷರು ಗಿರೀಶ್ ಅನೇಕ ಗಣ್ಯರು ಭಾಗಿಯಾಗಿದ್ದರು

Recent Articles

spot_img

Related Stories

Share via
Copy link