ನಾಯಕನಹಟ್ಟಿ :
ಒಳ ಮೀಸಲಾತಿ ಜಾರಿಗಾಗಿ ಸಮೀಕ್ಷೆ ಗಾಗಿ ನಿಮ್ಮ ಮನೆಗೆ ಮನೆಗೆ ಬರುವ ಅಧಿಕಾರಿಗಳು ಬಂದಾಗ ಮಾದಿಗ ಎಂದು ಹೆಮ್ಮೆಯಿಂದ ಬರಿಸಬೇಕು ಎಂದು ಹಾಯ್ಕಲ್ ಗ್ರಾಮದ ಯುವಕ ನವೀನ ಮನವಿ ಮಾಡಿಕೊಂಡರುಸಮೀಪದ ಹಾಯ್ಕಲ್ ಗ್ರಾಮದಲ್ಲಿ ಜಾತಿಗಣತಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಒಳ ಮೀಸಲಾತಿ ಸಂಬಂಧಿಸಿದಂತೆ ನಡೆಯುತ್ತಿರುವ ಜಾತಿ ಗಣತಿಯಲ್ಲಿ ನಮ್ಮ ಮಾದಿಗ ಸಮುದಾಯದವರು ಕ್ರಮ ಸಂಖ್ಯೆ 61 ರಲ್ಲಿ ಮಾದಿಗ ಅಂತ ಸ್ವಾಭಿಮಾನದಿಂದ ಬರೆಸಬೇಕು ಎಂದು ಮನವಿ ಮಾಡಿಕೊಂಡರು.ಆದಿ ದ್ರಾವಿಡ, ಆದಿ ಕರ್ನಾಟಕ ಎಸ್ ಸಿ ಹರಿಜನ, ಆದಿ ಆಂಧ್ರ ಬರೆಸಬೇಡಿ ಎಂದು ತಿಳಿಸಿದರು.ಹಬ್ಬದ ಹರಿದಿನ ಜಾತ್ರೆಯ ಜಯಂತಿ ಆಚರಣೆ ಮದುವೆ ಸಮಾರಂಭಗಳು ಕೈ ಬಿಟ್ಟು ಜಾತಿಗಣತಿಯತ್ತ ಗಮನ ಹರಿಸಬೇಕು ಎಂದು ತಿಳಿಸಿದರು.ಸಮೀಕ್ಷೆಯಲ್ಲಿಮಾದಿಗ ಅಂತ ಹೆಸರನ್ನು ಸ್ಪಷ್ಟವಾಗಿ ಹೇಳಬೇಕು ಎಂದರು.ಯಾವುದೇ ಮುಜುಗರಕ್ಕೆ ಒಳಗಾಗದೆ ಹಿಂಜರಿಯದೆ ನಾಚಿಕೆ ಪಟ್ಟಿಕೊಳ್ಳದೇ ಮೂಲ ಜಾತಿ ಮಾದಿಗ ಎಂದು ನಮೂದಿಸಬೇಕು ಎಂದು ಅವರು ಮಾತನಾಡಿದರು.
