ಪಟಿಯಾಲ ಜೈಲಿಂದ ನವಜೋತ್‌ ಸೊಂಗ್‌ ಸಿದ್ದು ಬಿಡುಗಡೆ….!

ಹೊಸದಿಲ್ಲಿ:

    34 ವರ್ಷಗಳ ಹಿಂದೆ ಸಂಭವಿಸಿದ್ದ ಅಚಾತುರ್ಯ ಘಟನೆಗೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿದ್ದ ರ ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಇಂದು ಪಟಿಯಾಲ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಅವರ ಟ್ವಿಟ್ಟರ್‌ ಖಅತೆಯಲ್ಲಿ ಬರೆಯಲಾಗಿದೆ.

    ಬಿಡುಗಡೆಗೂ ಮುನ್ನ ಅವರ ಬೆಂಬಲಿಗರು ಪಟಿಯಾಲ ಜೈಲಿನ ಹೊರಗೆ ಜಮಾಯಿಸಿ ಭವ್ಯ ಸ್ವಾಗತ ಕೋರಿದ್ದಾರೆ. “ನವಜೋತ್ ಸಿಧು ಅವರ ಬಿಡುಗಡೆ ನಮಗೆ ಹಬ್ಬದಂತಿದೆ” ಎಂದು ಜೈಲಿನ ಹೊರಗೆ ಕಾಯುತ್ತಿರುವ ಕಾಂಗ್ರೆಸ್ ಮುಖಂಡರೊಬ್ಬರು  ತಿಳಿಸಿದ್ದಾರೆ.

    ದೊಂಬಿ ಪ್ರಕರಣದಲ್ಲಿ ನವಜೋತ್ ಸಿಂಗ್ ಸಿಧು ಅವರಿಗೆ ಒಂದು ವರ್ಷ ಶಿಕ್ಷೆ ವಿಧಿಸಲಾಗಿದ್ದು, ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿತ್ತು, ಆದರೆ ಅವರ “ಉತ್ತಮ ನಡವಳಿಕೆ”ಯ ಕಾರಣದಿಂದ ಬೇಗ ಬಿಡುಗಡೆಯಾಗುತ್ತಿದ್ದಾರೆ ಎಂದು ಅವರ ಅಭಿಮಾನಿಯೊಬ್ಬರು ಹೇಳಿದ್ದಾರೆ.

     ಸಿದ್ದು ಪರ ವಕೀಲ ಎಚ್‌ಪಿಎಸ್ ವರ್ಮಾ ಮಾತನಾಡಿ, “ನವಜೋತ್ ಸಿಧು ಅವರ ಬಿಡುಗಡೆಯು ಮೇ ತಿಂಗಳಲ್ಲಿ ನಿಗದಿಯಾಗಿತ್ತು, ಆದರೆ ಉತ್ತಮ ನಡವಳಿಕೆ ಕಾರಣ ಅವರನ್ನು ಬೇಗ ಬಿಡುಗಡೆ ಮಾಡಲಾಗುತ್ತಿದೆ  , ಎಲ್ಲಾ ಭಾನುವಾರದ ರಜಾದಿನಗಳನ್ನು ಶಿಕ್ಷೆಯ ಅವಧಿಯಿಂದ ಕಡಿತಗೊಳಿಸಲಾಗುತ್ತದೆ. ಆದ್ದರಿಂದ, (ನವಜೋತ್) ಸಿಧು ಅವರು 48 ದಿನಗಳ ಶಿಕ್ಷೆ ರದ್ದತಿಯನ್ನು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link