ನವದೆಹಲಿ
ಈ ಬಾರಿಯ ಚಳಿಗೆ ಉತ್ತರ ಭಾರತ ತರತರ ನಡುಗುತ್ತಿದೆ ಈ ಯಮ ಚಳಿಗೆ ಉತ್ತರದ ಜನ ಮನೆಗಳಿಂದ ಹೊರ ಬರಲು ಸಹ ಹೆದರುವ ಪರಿಸ್ಥಿತಿ ಏರ್ಪಟ್ಟಿದೆ.
ದೆಹಲಿಯಲ್ಲಿಯಂತೂ ಮೂವತ್ತು ವರ್ಷದಲ್ಲಿಯೇ ಅತ್ಯದಿಕ ಚಳಿ ವರದದಿಯಾಗಿದೆ. ಇಂದು ಬೆಳಿಗ್ಗೆ 2.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದಟ್ಟ ಮಂಜಿನಿಂದಾಗಿ ಕತ್ತಲು ಆವರಿಸಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿದೆ. ದಟ್ಟ ಮಂಜಿನ ಕಾರಣದಿಂದಾಗಿ ದೆಹಲಿಯಲ್ಲಿ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.ದಟ್ಟ ಮಂಜು ಮತ್ತು ಕಲುಶಿತ ಹೊಗೆ ಸೇರಿ ದೆಹಲಿಯ ಹವಾಮಾನ ತೀವ್ರವಾಗಿ ಹದಗೆಟ್ಟಿದ್ದು, ಮಾಸ್ಕ್ ಇಲ್ಲದೆ ಹೊರಗೆ ಬರುವುದು ಅಸಾಧ್ಯವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.