ರೈತನ ಪ್ರಾಣ ಕಾಪಾಡಿದ ಎನ್‌ ಸಿ ಸಿ ಕಯಾಡೆಟ್…!

ತುಮಕೂರು

   ನಾಲ್ಕನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ವತಿಯಿಂದ ಆಯೋಜಿಸಿರುವ ಟಿ ಎಸ್ ಸಿ / ಸಿಎ ಟಿ ಸಿ ಶಿಬಿರದ ಕ್ಯಾಂಪ್ ಕಮಾಂಡರ್ ಕರ್ನಲ್ ಜಿಎಸ್ ಗುಜರಾಲ್ ಮತ್ತು ಕರ್ನಲ್ ನರೇಂದ್ರ ಭಂಡಾರಿ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು,

   ತುಮಕೂರಿನ ಹಿರೇಹಳ್ಳಿ ಹತ್ತಿರವಿರುವ ಮಂದಾರ ಗಿರಿ ಬೆಟ್ಟದ ಪಕ್ಕದಲ್ಲಿ ಕೆಡೆಟ್ಸ್ ಗಳು ಫೈರಿಂಗ್ ತರಬೇತಿ ಪಡೆಯುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಹತ್ತಿರದ ಸುಮಾರು 20 ಅಡಿ ಆಳದ ಸುಟ್ಟ ಟೈರಿನ ದ್ರವದ ಗುಂಡಿಯಲ್ಲಿ ಕುರಿ ಮೇಯಿಸುವ ವ್ಯಕ್ತಿ ಒಬ್ಬ ಸೇರಿದಂತೆ ಏಳೆಂಟು ಕುರಿಗಳು ಆಯತಪ್ಪಿ ಆ ಗುಂಡಿಯಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವು. ದುರಂತವೆಂದರೆ ಆ ಗುಂಡಿಯ ತುಂಬ ಡಾಂಬರ್ ದ್ರವ ಇದ್ದುದರಿಂದ ಅದರಲ್ಲಿ ಬಿದ್ದ ವ್ಯಕ್ತಿಯು ಸೇರಿದಂತೆ ಕುರಿಗಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವು.

  ಅಲ್ಲಿನ ಸಾರ್ವಜನಿಕರು ಈ ದೃಶ್ಯವನ್ನು ಕಂಡು ಕೂಗಾಡುತ್ತಿರುವುದನ್ನು ಗಮನಿಸಿದ ಬಿ ಹೆಚ್ ಎಂ ತಿಲಕ್ ರಾಜ್, ಕೆಡೆಟ್ ಮಹೇಶ್,ಜುಬೇದ್, ಮನೋಜ್, ದರ್ಶನ್ ಅವರುಗಳು ಗುಂಡಿಯ ಬಳಿ ಓಡೋಡಿ ಬಂದು, ಕುರಿ ಕಾಯುವ ವ್ಯಕ್ತಿಯು ಸೇರಿದಂತೆ ನಾಲ್ಕು ಕುರಿಗಳನ್ನು ಹೊರ ತೆಗೆದು ಬದುಕಿಸಿದರು. ಇವರ ಕಾರ್ಯವನ್ನು ಕಂಡು ಕಮಾಂಡಿಂಗ್ ಆಫೀಸರ್ ಅಭಿನಂದನೆ ಸಲ್ಲಿಸಿದರು. ಇಪ್ಪತ್ತು ಅಡಿ ಆಳದ ಗುಂಡಿಯಲ್ಲಿ ಡಾಂಬರ್ ದ್ರವ ಇರುವ ಕಾರಣದಿಂದ ಇಂತಹ ಅನಾಹುತಗಳು ಸಂಭವಿಸುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನಹರಿಸಿ, ಸುರಕ್ಷತೆಗಾಗಿ ಗುಂಡಿ ಮುಚ್ಚುವ ಕಾರ್ಯ ಅತಿ ತುರ್ತಾಗಿ ನಡೆಯಬೇಕಾಗಿದೆ. ಜೀವ ರಕ್ಷಣೆಗೆ ಸಹಕರಿಸಬೇಕಾಗಿದೆ ಎಂದು ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap