ಮುಂಬೈ:
ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಬಣಕ್ಕೆ ಕೊನೆಗೂ ಪಕ್ಷದ ಹೆಸರು ಮತ್ತು ಚಿನ್ಹೆಯ ಗೊಂದಲಕ್ಕೆ ಕೊನೆಗೂ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ.
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಶರದ್ ಪವಾರ್ ಬಣಕ್ಕೆ ಪಕ್ಷದ ಹೆಸರನ್ನು ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ಚಂದ್ರ ಪವಾರ್’ ಬಳಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಮಾತ್ರವಲ್ಲದೇ ಶರದ್ ಪವಾರ್ ಬಣಕ್ಕೆ ಚುನಾವಣೆಗೆ ‘ಕಹಳೆ ಊದುವ ವ್ಯಕ್ತಿ’ಯ ಗುರುತನ್ನು ಚಿನ್ಹೆಯಾಗಿ ಬಳಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಈ ಚಿನ್ಹೆಯನ್ನು ಇತರರು ಬಳಸದಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. ಅಂತೆಯೇ ಎನ್‌ಸಿಪಿ ಅಜಿತ್ ಪವಾರ್ ಬಣ ‘ಗಡಿಯಾರ’ ಚಿಹ್ನೆಯ ಕುರಿತು ಸಾರ್ವಜನಿಕ ನೋಟಿಸ್ ನೀಡುವಂತೆ ಕೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ