ಬೆಂಗಳೂರು
ರಾಜ್ಯದಲ್ಲಿ ಚುನಾವಣೆ ಹತ್ತಿರದಲ್ಲೇ ಇರುವ ಕಾರಣ ಈಗಾಗಲೇ ಬೇರೆ ಪಕ್ಷಗಳು ಈಗಾಗಲೆ ಮುಂಚೂಣಿಯಲ್ಲಿ ಚುನಾವಣಾ ಸಿದ್ದತೆ ಮಾಡುತ್ತಿದ್ದು ಈಗ ದಳಪತಿಗಳು 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದಾರೆ. ಇತ್ತ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲದಲ್ಲಿದ್ದು, ಈ ತಿಂಗಳ ಕೊನೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಎರಡನೇ ಪಟ್ಟಿ ತಯಾರಿ ನಡೆಸಿದೆ. ಮಾರ್ಚ್ 12 ರಿಂದ 14 ತಾರೀಖಿನ ಒಳಗೆ ಎರಡನೇ ಪಟ್ಟಿಯನ್ನ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ನ ಎರಡನೇ ಪಟ್ಟಿ ಬಿಡುಗಡೆ ಸಾಕಷ್ಟು ಕುತೂಹಲವನ್ನ ಹುಟ್ಟಿಸಿದೆ ಏಕೆಂದರೆ, ಹಾಸನ ಟಿಕೆಟ್ ವಿಚಾರವಾಗಿ ಪಕ್ಷ ಹಾಗೂ ದೇವೇಗೌಡ ಕುಟುಂಬದಲ್ಲಿ ಸಾಕಷ್ಟು ಮಾತುಕತೆ ನಡೆದಿದೆ. ಇನ್ನೂ ಹಾಸನ ಜಿಲ್ಲೆ ರಾಜಕಾರಣ ವಿಚಾರದಲ್ಲಿ ನಾನು ಮಧ್ಯಪ್ರವೇಶಿಸಲ್ಲ ಹಾಸನ ಜಿಲ್ಲೆಯನ್ನ ಹೆಚ್.ಡಿ ರೇವಣ್ಣ ಅವರಿಗೆ ಬಿಟ್ಟಿದ್ದೇನೆ. ಪಕ್ಷಕ್ಕಾಗಿ ದುಡಿದವರನ್ನ ನಾನು ಎಂದೂ ಕೈಬಿಟ್ಟಿಲ್ಲ. ತಾಳ್ಮೆ ಅನ್ನೋದು ಇಲ್ಲಿ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ