ನೆಚ್ಚಿನ ಬೈಕ್‌ಗಾಗಿ ಈ ಕುಟುಂಬ ಭರಿಸಿದ ವೆಚ್ಚ ಎಷ್ಟು ಗೊತ್ತಾ?

ಚಂಡೀಗಢ:

    ಸಾಮಾನ್ಯವಾಗಿ ಒಂದು ಮನೆಯಿಂದ ಇನ್ನೊಂದು ಮನೆಗೆ ಶಿಫ್ಟ್‌ ಆದಾಗ ಸಾಮಗ್ರಿಗಳನ್ನು ಸಾಗಿಸುವುದೇ ದೊಡ್ಡ ತಲೆನೋವಾಗಿರುತ್ತದೆ.ಹಾಗಾಗಿ ಹೆಚ್ಚಿನವರು ದೂರದೂರಿಗೆ ಯಾರು ಅದನ್ನು ಶಿಫ್ಟ್‌ ಮಾಡುತ್ತಾರೆ ಎಂದು ಅಲ್ಲಿನ ಸಾಮಾಗ್ರಿಗಳನ್ನು ಬಹಳ ದೂರ ತೆಗೆದುಕೊಂಡು ಹೋಗುವ ಬದಲು ಹೊಸದನ್ನು ತೆಗೆದುಕೊಳ್ಳಬಹುದು ಎಂದು ಅವುಗಳನ್ನು ಅಲ್ಲಿಯೇ ಮಾರಾಟ ಮಾಡಿ ಬಿಡುತ್ತಾರೆ. ಆದರೆ ಇಲ್ಲೊಂದು ಪಂಜಾಬಿ ಕುಟುಂಬ ಯುಕೆಯಲ್ಲಿ ನೆಲೆಸಲು ನಿರ್ಧರಿಸಿದ್ದು, ತಮಗೆ ಪ್ರಿಯವಾದ ರಾಯಲ್ ಎನ್‌ಫೀಲ್ಡ್ ಅನ್ನು ಬಿಟ್ಟು ಹೋಗಲು ಇಷ್ಟವಿರದೆ ಅದನ್ನು ಸಾಗಿಸಲು ಲಕ್ಷಗಟ್ಟಲೆ ಹಣ ಖರ್ಚು ಮಾಡಿದೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್  ಆಗಿದೆ.

    ಪಂಜಾಬಿ ಕುಟುಂಬ ತಮ್ಮ ಪ್ರೀತಿಯ ಬುಲೆಟ್ ಮತ್ತು ಪೀಠೋಪಕರಣಗಳನ್ನು ಭಾರತದಿಂದ ಇಂಗ್ಲೆಂಡ್‌ನ ವೊಲ್ವರ್‌ಹ್ಯಾಂಪ್ಟನ್‌ನಲ್ಲಿರುವ ತಮ್ಮ ಹೊಸ ಮನೆಗೆ ಸಾಗಿಸಲುರೂ 4.5 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದೆಯಂತೆ. ವೈರಲ್ ಆದ ವಿಡಿಯೊದಲ್ಲಿ ಕಂಟೇನರ್ ಟ್ರಕ್‌ನಿಂದ ಬುಲೆಟ್ ಇಳಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಇನ್ನು ಬೈಕ್‌ ಮಾಲೀಕ ರಾಜ್‌ಗುರು ಸಾಗಣೆಯ ವೆಚ್ಚ ಲಕ್ಷಗಟ್ಟಲೆ ಖರ್ಚು ಆದರೂ ಎಲ್ಲಾ ಸಾಮಗ್ರಿಗಳು ಸುರಕ್ಷಿತವಾಗಿ ತಲುಪಿತು ಎಂದು ತಿಳಿಸಿದ್ದಾನೆ.

   ಈ ವಿಡಿಯೊ ಎಲ್ಲರ ಗಮನಸೆಳೆದು ಈಗಾಗಲೇ 3.9 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಮತ್ತು 2.4 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ನೆಟ್ಟಿಗರು ಈ ಕ್ರಮವನ್ನು ಹೊಗಳಿದ್ದಾರೆ. “ಎಲ್ಲವೂ ತಾತ್ಕಾಲಿಕ, ಆದರೆ ಬುಲೆಟ್ ಶಾಶ್ವತ” ಎಂದು ನೆಟ್ಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ

Recent Articles

spot_img

Related Stories

Share via
Copy link