ಹುಬ್ಬಳ್ಳಿ
ಕೇಂದ್ರ ಗೃಹ ಸಚಿವ ಅಮಿತ್‌ಶಾರನ್ನು ನೇಹಾ ಕುಟುಂಬಸ್ಥರು ಭೇಟಿ ಮಾಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರಕ್ಕೆ ಹುಬ್ಬಳ್ಳಿಗೆ ಬಂದಿದ್ದ ವೇಳೆ ಭೇಟಿ ಮಾಡಿದರು.
ರಾಜ್ಯ ವಿಧಾನ ಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ನೇತೃತ್ವದಲ್ಲಿ ನೇಹಾ ತಂದೆ ನಿರಂಜನ, ತಾಯಿ ಗೀತಾ, ಸಹೋದರ ನಿಹಾಲ್ ಭೇಟಿ ಮಾಡಿ, ನಮಗೆ ನ್ಯಾಯ ಕೊಡಿಸಿ ಎಂದು ಕೇಳಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಮಹೇಶ್ ಟೆಂಗಿನಕಾಯಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹುಬ್ಬಳ್ಳಿಯಲ್ಲಿ ಬುಧವಾರ ಚುನಾವಣಾ ಭಾಷಣ ಮಾಡಿದ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ತಾಯಿ ಭುವನೇಶ್ವರಿ, ಸಿದ್ದಾರೂಢ ಸ್ವಾಮೀಜಿ, ಕನಕದಾಸ, ಮೂರು ಸಾವಿರ ಮಠ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರನ್ನು ಸ್ಮರಿಸುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು.
ಇದು ಐತಿಹಾಸಿಕ ಚುನಾವಣೆ ₹12 ಲಕ್ಷ ಕೋಟಿ ಭ್ರಷ್ಟಾಚಾರ ಮಾಡಿದವರು ಒಂದು ಕಡೆ, ಸಿಎಂ, ಪಿಎಂ ಆಗಿದ್ದರು ಎಳ್ಳಷ್ಟೂ ಭ್ರಷ್ಟಚಾರ ಮಾಡದ ಮೋದಿ ಮತ್ತೊಂದು ಕಡೆ. ವಿದೇಶಕ್ಕೆ ಹೋಗಿ ಎಂಜಾಯ್ ಮಾಡೋರು ಒಂದು ಕಡೆ, ಜನರ ಜೊತೆ ದೀಪಾವಳಿ ಮಾಡೋ ಮೋದಿ ಮತ್ತೊಂದೆಡೆ ಇವರಿಬ್ಬರ ನಡುವೆ ತುಲನೆ ಮಾಡಬೇಕಿದೆ ಎಂದು ಹೇಳಿದರು.
ಪ್ರಹ್ಲಾದ್ ಜೋಶಿ ಇಲ್ಲಿಂದಲೇ ತ್ರಿವರ್ಣ ಧ್ವಜ ಹೋರಾಟ ಆರಂಭಿಸಿದರು, ಕರ್ನಾಟಕದವರಿಗೆ ಕಾಶ್ಮೀರ ವಿಚಾರ ತೆಗೆದುಕೊಂಡು ಏನೂ ಮಾಡಬೇಕು ಅಂತ ಖರ್ಗೆ ಅವರು ಹೇಳುತ್ತಾರೆ, ಕಾಂಗ್ರೆಸ್ 60 ವರ್ಷ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡಿತು. ಪ್ರಧಾನಿ ಮೋದಿ ಇದೆಲ್ಲಕ್ಕೂ ಸಮಾಪ್ತಿ ಹಾಡಿದ್ದಾರೆ ಎಂದರು.
ಆರ್ಟಿಕಲ್ 370 ತೆಗೆದಾಗ ರಾಹುಲ್ ಬಾಬಾ ಖುನ್ ಕೀ ಜಲಾ ಹುವಾ ಅಂತ ಅಂತಾರೆ, ಆದ್ರೆ ಕೆಲ ವರ್ಷಗಳಿಂದ ಕಾಶ್ಮೀರ ದಲ್ಲಿ ಯಾರ ಮೇಲೂ ಒಂದು ಕಲ್ಲು ಬಿದ್ದಿಲ್ಲ, ಕರ್ನಾಟಕವನ್ನು ಕೆಲವರು ಸುರಕ್ಷಿತ ತಾಣವನ್ನಾಗಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.
ಮಹಿಳೆಯರಿಗೆ ಕರ್ನಾಟಕದ ಸುರಕ್ಷಿತವಲ್ಲ ಎಂದು ಹೇಳಿದ ಅವರು, ನೇಹಾ ಕೊಲೆಗೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು. ಆತಂಕವಾದಕ್ಕೆ ಅಂತ್ಯ ಹಾಡಬೇಕೆಂದ್ರೆ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು, ಮೋದಿ ಮತ್ತೊಮ್ಮೆ ಪ್ರಧಾನಿ ಆಗಿದ್ದರಿಂದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಯಿತು ಎಂದರು.
ಮತ ಬ್ಯಾಂಕ್ ದೂರವಾಗುತ್ತೆ ಅಂತ ಸೋನಿಯಾ, ರಾಹುಲ್, ಖರ್ಗೆ ರಾಮ ಪ್ರಾಣ ಪ್ರತಿಷ್ಠಾಪನೆಯಿಂದ ದೂರ ಉಳಿದರು, ಭ್ರಷ್ಟಾಚಾರ, ಪರಿವಾರವಾದದಲ್ಲಿ ಕಾಂಗ್ರೆಸ್ ಮುಳುಗಿತು. ಪ್ರಹ್ಲಾದ್ ಜೋಶಿಯನ್ನು ಮತ್ತೊಮ್ಮೆ ದೆಹಲಿಗೆ ಕಳಿಸಿ, ಅವರಿಗೆ ಏನೂ ಮಾಡಬೇಕು ನಾವು ಮಾಡ್ತೇವೆ, ನಮ್ಮ ಜೊತೆ ಜಗಳ ಮಾಡಿಯಾದ್ರೂ ಜೋಶಿ ಹುಬ್ಬಳ್ಳಿ – ಧಾರವಾಡ ಗಳ ಅಭಿವೃದ್ಧಿ ಮಾಡಿದ್ದಾರೆ, ಇಂತಹ ಸಂಸದರು ಸಿಕ್ಕಾಗ ಬಿಟ್ಟುಕೊಡಬಾರದು ಎಂದರು.
ಸಿಎಂ ಸಿದ್ದರಾಮಯ್ಯ ಬರದಲ್ಲಿ ರಾಜಕಾರಣ ಮಾಡ್ತಿದ್ದಾರೆ, ಸಿಎಂ ಮತ್ತು ಡಿಸಿಎಂ ಪರಸ್ಪರ ಜಗಳ ಮಾಡಿಕೊಂಡು ವರದಿಯನ್ನು ತಡವಾಗಿ ಕಳುಹಿಸಿದರು. ಆದ್ದರಿಂದ ನಾವು ಪರಿಹಾರ ಕೊಡಲು ವಿಳಂಬವಾಯಿತು. ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಬಂತು. ಮಹಿಳೆಯರ ಜೊತೆ ಯಾರೇ ದೌರ್ಜನ್ಯ ಮಾಡಿದರೂ ನಾವು ಅವರ ಜೊತೆ ಇರಲ್ಲ ಎಂದರು.
ನಿಮ್ಮದೆ ಸರ್ಕಾರ ಇದೆ, ಕ್ರಮ ಯಾಕೆ ತೆಗೆದುಕೊಂಡಿಲ್ಲ, ವಿದೇಶಕ್ಕೆ ಹೋಗಲು ಏಕೆ ಬಿಟ್ಟಿರಿ ಎಂದು ಪ್ರಶ್ನೆ ಮಾಡಿದ ಅಮಿತ್ ಶಾ, ಅವರಿಗೆ ಕಠಿಣ ಶಿಕ್ಷೆ ನೀಡಿ ನಾವು ಬೆಂಬಲ ಕೊಡುತ್ತೇವೆ ಎಂದರು. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣಕ್ಕೆ ಯಾರು ಹೊಣೆ? ಮಹಿಳೆಯರಿಗೆ ಕರ್ನಾಟಕದ ಸುರಕ್ಷಿತವಲ್ಲ, ಮಹಿಳೆಯರ ರಕ್ಷಣೆ ನಿಮಗೆ ಆಗದಿದ್ದಲ್ಲಿ ಹೇಳಿ, ನಾವು ಕರ್ನಾಟಕವನ್ನು ಸುರಕ್ಷಿತವಾಗಿ ಇಡ್ತೇವೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ