ಹಿಂದಿ-ಇಂಗ್ಲಿಷ್ ಭಾಷಣ ಸ್ಪರ್ಧೆ ರದ್ದುಗೊಳಿಸಿದ ನೆಹರು ಯುವ ಕೇಂದ್ರ

ತುಮಕೂರು:

ಜಿಲ್ಲಾ ಕನ್ನಡ ಜಾಗೃತ ಸಮಿತಿ ಸದಸ್ಯರು, ಕನ್ನಡಪರ ಸಂಘಟನೆಗಳ ಮನವರಿಕೆ
 ಪ್ರಜಾಪ್ರಗತಿ ವರದಿ ಫಲಶೃತಿ

       ನೆಹರು ಯುವ ಕೇಂದ್ರದಲ್ಲಿ ಕನ್ನಡ ಭಾಷೆ ಕಡೆಗಣನೆ ಕುರಿತು ಪ್ರಜಾಪ್ರಗತಿ ಸೋಮವಾರ ಪ್ರಕಟಿಸಿದ ವರದಿ ಸಂಚಲನ ಮೂಡಿಸಿದ್ದು, ಸಿರಾ ರಸ್ತೆಯಲ್ಲಿರುವ ನೆಹರು ಯುವ ಕೇಂದ್ರದ ಕಚೇರಿಗೆ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಕನ್ನಡಪರಸಂಘಟನೆ ಮುಖಂಡರು ಭೇಟಿ ನೀಡಿ ಕನ್ನಡ ಭಾಷೆಗೆ ಮನ್ನಣೆ ನೀಡಬೇಕೆಂದು ಆಗ್ರಹಿಸಿ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟರು. ಈ ಹಿನ್ನೆಲೆಯಲ್ಲಿ ನೆಹರು ಯುವ ಕೇಂದ್ರ ಆಗಿರುವ ಪ್ರಮಾದಕ್ಕೆ ಕ್ಷಮೆ ಕೋರಿ ಕಾರ್ಯಕ್ರಮ ರದ್ದುಗೊಳಿಸಲು ಸ್ವ ಇಚ್ಚೆಯಿಂದ ಒಪ್ಪಿಕೊಂಡಿದ್ದು ಪ್ರಜಾಪ್ರಗತಿ ವರದಿ ಫಲಶೃತಿಎನಿಸಿದೆ.

ಯುವ ಕೇಂದ್ರಕ್ಕೆ ಭೇಟಿಕೊಟ್ಟ ಕನ್ನಡ ಜಾಗೃತ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಕೆಂಕೆರೆ ಹಾಗೂ ಉಗಮಶ್ರೀನಿವಾಸ್ ಅವರುಗಳು ನೆಹರು ಯುವ ಕೇಂದ್ರದಿಂದ ಕನ್ನಡ ಹೊರತುಪಡಿಸಿ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಪ್ರಧಾನವಾಗಿ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವ ಜನರು ಕುರಿತು ಆಯೋಜಿಸಿರುವ ಸ್ಪರ್ಧೆ ಆಕ್ಷೇಪ ವ್ಯಕ್ತಪಡಿಸಿದರು.

ಕನ್ನಡ ಕಾಯಕ ವರ್ಷದಲ್ಲಿ ಇದೆಂಥಾ ದುಃಸ್ಥಿತಿ:

ಕರ್ನಾಟಕ ಸರ್ಕಾರ ಕನ್ನಡ ಕಾಯಕ ವರ್ಷದ ಸಮಾರೋಪ ಸಮಾರಂಭದ ಸಂಭ್ರಮದಲ್ಲಿದೆ. ಅಲ್ಲದೇ ಪ್ರಸ್ತುತ ನವಂಬರ್ ತಿಂಗಳಿನಲ್ಲಿ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುತ್ತಿದೆ. ಇಂತಹ ಹೊತ್ತಲ್ಲಿ ನೆಹರು ಯುವ ಕೇಂದ್ರದವರು ಭಾಷಣ ಸ್ಪರ್ಧೆಯಲ್ಲಿ ಕನ್ನಡವನ್ನು ಕಡೆಗಣಿಸಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾಡುತ್ತಿರುವುದರ ಬಗ್ಗೆ ಜಾಗೃತಿ ಸಮಿತಿ ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು. ಜೊತೆಗೆ ದೂರವಾಣಿಯಲ್ಲಿ ಯುವ ಕೇಂದ್ರದ ಕೇಂದ್ರ ಕಚೇರಿ ಅಧಿಕಾರಿಗಳ ಜೊತೆಯೂಸಮಾಲೋಚನೆ ನಡೆಸಿದರು. ಮಂಗಳವಾರ ಬೆಂಗಳೂರಿನಿಂದ ಅಧಿಕಾರಿಗಳು ಆಗಮಿಸಿ ಈ ಬಗ್ಗೆ ಚಚೆರ್À ನಡೆಸಲಿದ್ದಾರೆಂದು ಸ್ಥಳೀಯ ಸಿಬ್ಬಂದಿ ಮಾಹಿತಿ ನೀಡಿದರು.

2ತಾಸು ಕನ್ನಡಪಾಠ:

ಜಿಲ್ಲಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರ ಜೊತೆಗೆ ಕನ್ನಡಪರ ಸಂಘಟನೆಗಳು ಬೆಂಬಲಕ್ಕೆ ಆಗಮಿಸಿದ್ದರು. ಸುಮಾರು ಎರಡು ಗಂಟೆಗಳ ಕಾಲ ನೆಹರು ಯುವ ಕೇಂದ್ರದ ಕಚೇರಿಯೊಳಗೆ ಕುಳಿತು ಸ್ಥಳೀಯ ಸಿಬ್ಬಂದಿ ಜೊತೆ ಕನ್ನಡತನ, ಕನ್ನಡ ಹಿರಿಮೆ, ಗರಿಮೆ, ನಾಡು, ನುಡಿ, ಸಂಸ್ಕøತಿ, ಕನ್ನಡ ಬಳಕೆ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಅಲ್ಲದೇ ನೆಹರು ಯುವ ಕೇಂದ್ರದ ಮುಂದಿನ ಎಲ್ಲಾ ಕಾರ್ಯಕ್ರಮಗಳ ಚಟುವಟಿಕೆಗಳ ಮಾಹಿತಿಗಳು ಕನ್ನಡದಲ್ಲೂ ಕಡ್ಡಾಯವಾಗಿ ಇರಬೇಕೆಂದು ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಸಿಬ್ಬಂದಿಯವರು ಕೇಂದ್ರ ಕಚೇರಿಯವರೆಗೆ ಸೋಮವಾರ ನಡೆದ ವಿವರಗಳನ್ನು ರವಾನಿಸಿದ್ದಾರೆ.

ಕನ್ನಡ ನಿರ್ಲಕ್ಷ್ಯದ ವರದಿ: ನೆಹರು ಯುವ ಕೇಂದ್ರದ ಕನ್ನಡ ಕಡೆಗಣನೆ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್. ನಾಗಾಭರಣ ಹಾಗೂ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ ಅವರ ಗಮನಕ್ಕೂ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಉಗಮ ಶ್ರೀನಿವಾಸ್ ಹಾಗೂ ಮಲ್ಲಿಕಾರ್ಜುನ ಕೆಂಕೆರೆ ತಂದರು. ತುಮಕೂರಿನ ನೆಹರು ಯುವ ಕೇಂದ್ರದಲ್ಲಿ ನಡೆದ ಎಲ್ಲಾ ಮಾಹಿತಿಯನ್ನು ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳುಹಿಸಿದ್ದಾರೆ. ಇನ್ನು ಒಂದೆರೆದು ದಿವಸದಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆಂದು ಜಿಲ್ಲಾ ಜಾಗೃತ ಸಮಿತಿ ಸದಸ್ಯರು ಹೇಳಿದರು.

ಕನ್ನಡ ಜಾಗೃತಿಯಲ್ಲಿ ಮುಂಚೂಣಿಯಲ್ಲಿರುವ ಸಮಿತಿ, ಕರವೇ, ಜಯಕರ್ನಾಟಕ ಸಾಥ್

ಈಗಾಗಲೇ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಆಡಳಿತದಲ್ಲಿ ಕನ್ನಡ ಬಳಕೆ ಸಂಬಂಧ ಹಲವಾರು ಅಭಿಯಾನಗಳನ್ನು ಯಶಸ್ವಿಯಾಗಿ ನಡೆಸಿದ್ದು ಕನ್ನಡ ಅನುಷ್ಠಾನದ ಬಗ್ಗೆ ಶ್ರಮಿಸುತ್ತಿದೆ. ಪ್ರಸ್ತುತ ಪ್ರಜಾಪ್ರಗತಿ ವರದಿ ಆಧರಿಸಿ ನೆಹರು ಯುವ ಕೇಂದ್ರದವರಿಗೆ ಕನ್ನಡ ಬಳಕೆ ಬಗ್ಗೆ ಅರಿವು ಮೂಡಿಸಿದ್ದು, ಸಮಿತಿಯವರ ಕನ್ನಡಪರ ಕಾಳಜಿ ಪ್ರತೀಕವಾಗಿದೆ. ಜಿಲ್ಲಾ ಜಾಗೃತ ಸಮಿತಿ ಭೇಟಿ ವೇಳೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಅರುಣಕುಮಾರ್, ಸಂಜಯ್, ಸುನಿಲ್‍ಗೌಡ, ಕರವೇ ಜಿಲ್ಲಾಧ್ಯಕ್ಷ ಮಂಜುನಾಥಗೌಡ, ವಿಜಯ್ ಮತ್ತಿತರರು ಉಪಸ್ಥಿತರಿದ್ದು, ನೆಹರು ಯುವಕೇಂದ್ರದಲ್ಲಿ ಕನ್ನಡ ಬಳಕೆ ಕಡ್ಡಾಯವಾಗಬೇಕೆಂದು ಆಗ್ರಹ ಮಾಡಿದರು.

ತ್ರಿಭಾಷಾ ಸೂತ್ರ ಅನುಸರಿಸಬೇಕೆಂಬ ನಿಯಮವನ್ನು ಉಲ್ಲಂಘಿಸಿ ಕನ್ನಡವನ್ನು ಕಡೆಗಣಿಸಿರುವ ನೆಹರು ಯುವ ಕೇಂದ್ರದ ನಡೆ ಸರಿಯಲ್ಲ. ಈ ಕೂಡಲೇ ತನ್ನ ತಪ್ಪನ್ನು ಸರಿಪಡಿಸಿಕೊಂಡು ಕನ್ನಡದಲ್ಲಿ ಸ್ಪರ್ಧೆ ನಡೆಸಲಿ. ಈ ಸಂಬಂಧ ವಿಸ್ತøತ ವರದಿ ಮಾಡಿ ಗಮನಸೆಳೆದ ಪ್ರಜಾಪ್ರಗತಿಯನ್ನು ಅಭಿನಂದಿಸುವೆ.

-ಮಲ್ಲಿಕಾರ್ಜುನ ಕೆಂಕೆರೆ. ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ 

ಕರ್ನಾಟಕ ಸರ್ಕಾರ ಕನ್ನಡ ಕಾಯಕ ವರ್ಷ ಆಚರಿಸುತ್ತಿರುವ ಈ ಸಂದರ್ಭದಲ್ಲೇ ನೆಹರು ಯುವ ಕೇಂದ್ರದವರು ಕನ್ನಡ ಕಡೆಗಣನೆ ಮಾಡಿದ್ದಾರೆ. ಇಂತಹ ತಪ್ಪು ಮತ್ತೆ ಆಗಬಾರದು, ಕನ್ನಡ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಬೇಕು. ಒಂದುಸ್ಪರ್ಧೆ ಮಾಡುವುದಿದ್ದರೆ ಕನ್ನಡದಲ್ಲಿ ಮಾಡಲಿ. ಇಲ್ಲದಿದ್ದರೆ ಇಡೀ ಕಾರ್ಯಕ್ರಮವನ್ನು

– ಉಗಮ ಶ್ರೀನಿವಾಸ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು

 

 


 ನೆಹರು ಯುವಕೇಂದ್ರಕ್ಕೆ ಭೇಟಿ ನೀಡಿ ಭಾಷಣ ಸ್ಪರ್ಧೆಯಲ್ಲಿ ಕನ್ನಡ ಕಡೆಗಣನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಜಾಗೃತ ಸಮಿತಿ ಸದಸ್ಯರು ಹಾಗೂ ಕನ್ನಡಪರ ಸಂಘಟನೆ ಮುಖಂಡರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap