ನೇಪಾಳ :
ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ನಲ್ಲಿ ನೇಪಾಳ ತಂಡ ವಿಶ್ವದಾಖಲೆಗಳನ್ನೆಲ್ಲಾ ಮುರಿದು ಹೊಸ ಇತಿಹಾಸ ಬರೆದಿದೆ. ಮಂಗೋಲಿಯಾ ವಿರುದ್ಧದ ಪಂದ್ಯದಲ್ಲಿ ನೇಪಾಳ ತಂಡದ ಬ್ಯಾಟರ್‌ಗಳು ಅಬ್ಬರಿಸಿದ್ದು 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಬರೊಬ್ಬರಿ 314 ರನ್ ಗಳಿಸಿ ವಿಶ್ವ ದಾಖಲೆ ಬರೆದಿದೆ.
ಟಿ20 ಇತಿಹಾಸದಲ್ಲಿ ತಂಡವೊಂದು 300 ರನ್ ದಾಟಿದ್ದು ಇದೇ ಮೊದಲು. ನೇಪಾಳದ ಬ್ಯಾಟ್ಸ್‌ಮನ್‌ಗಳು ದುರ್ಬಲ ಮಂಗೋಲಿಯಾ ಬೌಲರ್‌ಗಳನ್ನು ಅಕ್ಷರಶಃ ಧ್ವಂಸಮಾಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಮಾತ್ರವಲ್ಲದೆ ಇನ್ನೂ ಕೆಲ ಪ್ರಮುಖ ವಿಶ್ವದಾಖಲೆಗಳು ಈ ಪಂದ್ಯದಲ್ಲಿ ನಿರ್ಮಾಣವಾಗಿದೆ. ಇದೊಂದೇ ಪಂದ್ಯದಲ್ಲಿ ಅತ್ಯಂತ ವೇಗದ ಅರ್ಧ ಶತಕ ಕೂಡ ದಾಖಲಾಗಿದ್ದು ಟಿ20 ಇತಿಹಾಸದಲ್ಲಿ ಅತ್ಯಂತ ವೇಗದ ಶತಕದ ದಾಖಲೆ ಕೂಡ ಇದೇ ಪಂದ್ಯದಲ್ಲಿ ನಿರ್ಮಾಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ