ಕಾರವಾರ
ಬೋಟಿಂಗ್ ಎಂಜಾಯ್ ಮಾಡಲು, ಸ್ಕೂಬಾ ಡೈವಿಂಗ್ ಮಾಡಲು ಸಾವಿರಾರು ಮಂದಿ ಭೇಟಿ ನೀಡುವ ನೇತ್ರಾಣಿ ದ್ವೀಪದಲ್ಲಿ ಮೀನುಗಾರರು ಹಾಗೂ ಪ್ರವಾಸಿಗರಿಗೆ ಮೂರು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ದ್ವೀಪದಲ್ಲಿ ನೌಕಾನೆಲೆ ಸಮರಾಭ್ಯಾಸ ಹಿನ್ನೆಲೆ ಮೂರು ದಿನಗಳ ಕಾಲ ಮೀನುಗಾರರು ಹಾಗೂ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಅ.14ರಿಂದ 16ರವರೆಗೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನೇತ್ರಾಣಿ ದ್ವೀಪದಿಂದ 10 ನಾಟಿಕಲ್ ಮೈಲು ದೂರದವರೆಗೆ ನಿಷೇಧ ಹೇರಲಾಗಿದೆ. ಆಗಸದಿಂದ ಯುದ್ಧ ಫೈಟರ್ ಮೂಲಕ ನೌಕಾದಳದಿಂದ ಸಮರಾಭ್ಯಾಸ ನಡೆಯಲಿದೆ. ಆಗಸದಿಂದ ನೇತ್ರಾಣಿ ದ್ವೀಪದಲ್ಲಿ ಫೈರಿಂಗ್ ನಡೆಯುವುದರಿಂದ ನೇತ್ರಾಣಿ ದ್ವೀಪದಲ್ಲಿ ಮೀನುಗಾರರು, ಪ್ರವಾಸಿಗರಿಗೆ 3 ದಿನ ನಿರ್ಬಂಧ ಹೇರಲಾಗಿದೆ.
ನೇತ್ರಾಣಿ ದ್ವೀಪ ಸ್ಕೂಬಾ ಡೈವಿಂಗ್ಗೆ ಹೆಸರುವಾಸಿಯಾಗಿದೆ. ಸ್ಕೂಬಾ ಡೈವಿಂಗ್ ಮಾಡಲು ಇಲ್ಲಿಗೆ ಜನ ಭೇಟಿ ನೀಡುತ್ತಾರೆ, ಅದರಲ್ಲೂ ದಿ.ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿಯಲ್ಲಿ ಪುನೀತ್ ಅವರು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಈ ಚಿತ್ರದ ಬಳಿಕ ನೇತ್ರಾಣಿ ದ್ವೀಪಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ.
ಬಹುತೇಕರು ಶುಕ್ರವಾರ ಸಂಜೆ 6.50ಕ್ಕೆ ಬೆಂಗಳೂರಿನಿಂದ ಹೊರಡುವ ಟ್ರೈನ್ ಮೂಲಕ ಶನಿವಾರ ಬೆಳಗ್ಗೆ 6.00ಕ್ಕೆ ಮುರುಡೇಶ್ವರಕ್ಕೆ ತಲುಪುತ್ತಾರೆ. ಬಳಿಕ ತಮ್ಮ ವೀಕ್ ಎಡ್ ಎಂಜಾಯ್ ಮಾಡ್ತಾರೆ. ಇನ್ನು ಸ್ಕೂಬಾ ಡೈವಿಂಗ್ ಮಾಡಲು ಮೊದಲೆ ಬುಕ್ಕಿಂಗ್ ಮಾಡಬೇಕು. ಆನ್ಲೈನ್ ಮೂಲಕ ಪ್ಯಾಕೇಜ್ ಬುಕ್ಕಿಂಗ್ ಮಾಡಿಕೊಂಡು ಬರಬೇಕು.
