ಅಖಿಲ ಕರ್ನಾಟಕ ಡಾ. ಜಿ ಪರಮೇಶ್ವರ್ ಅಭಿಮಾನಿಗಳ ವೇದಿಕೆ ವತಿಯಿಂದ 2026ರ ಕ್ಯಾಲೆಂಡರ್ ಬಿಡುಗಡೆ

ಕೊರಟಗೆರೆ:-

    ಅಖಿಲ ಕರ್ನಾಟಕ ಡಾ. ಜಿ ಪರಮೇಶ್ವರ್ ಅಭಿಮಾನಿಗಳ ವೇದಿಕೆ ವತಿಯಿಂದ 2026ರ ಕ್ಯಾಲೆಂಡರ್ ಅನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ಬೆಂಗಳೂರಿನ ಗೃಹ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷರಾದ ಎಂ ನಾಗಭೂಷಣ್, ಗೌರವಾಧ್ಯಕ್ಷ ಎನ್ ಆರ್ ಹೆಗಡೆ ಸೇರಿದಂತೆ ಇತರೆ ಸ್ನೇಹಿತರು ಉಪಸ್ಥಿತರಿದ್ದರು.

    ಕ್ಯಾಲೆಂಡರ್ ಬಿಡುಗಡೆಯ ನಂತರ ಅಖಿಲ ಕರ್ನಾಟಕ ಡಾಕ್ಟರ್ ಜಿ ಪರಮೇಶ್ವರ್ ಅಭಿಮಾನಿ ಬಳಗದ ವೇದಿಕೆಯ ರಾಜ್ಯಾಧ್ಯಕ್ಷ ಎಂ ನಾಗಭೂಷಣ್ ಮಾತನಾಡಿ ಹಿರಿಯ ಮುತ್ಸದಿ ರಾಜಕಾರಣಿ ಹಾಗೂ ಅಜಾತಶತ್ರು ಡಾ. ಜಿ ಪರಮೇಶ್ವರ್ ಅವರಿಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಯಾಗುವ ಸದಾವಕಾಶವಿದ್ದು, ರಾಜ್ಯ ಸೇರಿದಂತೆ ತುಮಕೂರು ಜಿಲ್ಲೆ ಹಾಗೂ ಕೊರಟಗೆರೆ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವಿದೆ, ಪ್ರತಿವರ್ಷದಂತೆ ಈ ಬಾರಿಯೂ 2026ರ ಡಾ.ಜಿ ಪರಮೇಶ್ವರವರ ಕ್ಯಾಲೆಂಡರ್ ನ ಅವರ ಅಭಿಮಾನಿ ಬಳಗದಿಂದ ಬಿಡುಗಡೆಗೊಳಿಸಿದ್ದು, ಕರುನಾಡಿನ ಎಲ್ಲಾ ಅಭಿಮಾನಿಗಳಿಗೂ ಕ್ಯಾಲೆಂಡರ್ ನ ಕಲ್ಪಿಸುವಂತಹ ಕೆಲಸ ಮಾಡಲಾಗುವುದು ಎಂದು ಎಂ ನಾಗಭೂಷಣ್ ಅಭಿಪ್ರಾಯಪಟ್ಟರು.

Recent Articles

spot_img

Related Stories

Share via
Copy link