ಸೋನಿಯಿಂದ ಹೊಸ ಕ್ಯಾಮೆರಾ ಬಿಡುಗಡೆ…..!

ನವದೆಹಲಿ: 

    ಸೋನಿ ಇಂಡಿಯಾ ತನ್ನ ಜನಪ್ರಿಯ ಅಲ್ಫಾ 7 ಪೂರ್ಣ-ಫ್ರೇಮ್ ಮಿರರ್‌ಲೆಸ್ ಶ್ರೇಣಿ ಯಲ್ಲಿ ಬಹು ನಿರೀಕ್ಷಿತ ಐದನೇ ಪೀಳಿಗೆಯ ಐಎಲ್‌ಸಿಇ-7ವಿ ( ILCE-7V) ಕ್ಯಾಮೆರಾ ಪರಿಚಯಿಸಿದೆ.ಇದು ಸರಿಸುಮಾರು 33.0 ಪರಿಣಾಮಕಾರಿ ಎಂಪಿ (ಮೆಗಾಪಿಕ್ಸಲ್‌) ಹೊಂದಿರುವ ಹೊಸದಾಗಿ ಅಭಿವೃದ್ಧಿಪಡಿಸಲಾದ ಭಾಗಶಃ ಸ್ಟ್ಯಾಕ್ಡ್‌ ಎಕ್ಸ್‌ಮೋರ್‌ ಆರ್‌ಎಸ್‌™ ಸಿಎಂಒಎಸ್‌ ಇಮೇಜ್ ಸೆನ್ಸರ್‌ನಿಂದ ಕಾರ್ಯನಿರ್ವಹಿಸಲಿದೆ.

    ಹೊಸ ಇಮೇಜ್ ಪ್ರೊಸೆಸಿಂಗ್ ಎಂಜಿನ್ BIONZ XR2™ ಇತ್ತೀಚಿನ α™ (ಅಲ್ಪಾ ಟಿಎಂ) ಸರಣಿಯ ಎಐ ಸಂಸ್ಕರಣಾ ಘಟಕದ ಕಾರ್ಯಗಳನ್ನು ಸಂಯೋಜಿಸುತ್ತದೆ. ಈ ನಾವೀನ್ಯತೆಗಳ ಮೂಲಕ, ILCE-7V ನೈಜ ಸಮಯ ಗುರುತಿಸುವ ಎಎಫ್‌ (ಆಟೊ-ಫೋಕಸ್) ನಿಂದ ರಿಯಲ್-ಟೈಮ್ ಟ್ರ್ಯಾಕಿಂಗ್, ವೇಗ, ಸ್ಥಿರ ಬಣ್ಣ ನಿಖರತೆ, ಸ್ಥಿರ ಚಿತ್ರ ಸೆರೆಹಿಡಿಯುವಿಕೆ ಮತ್ತು ವಿಡಿಯೊ ಚಿತ್ರೀಕರಣ ದವರೆಗೆ ಚಿತ್ರದ ಪ್ರತಿಯೊಂದು ವಿವರಗಳಲ್ಲೂ ಗಮನಾರ್ಹ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. 

   ಇದಕ್ಕೆ ಪೂರಕವಾಗಿ, ಸೋನಿ ಎಫ್‌ಇ 28-70ಎಂಎಂ ಎಫ್‌ 3.5-5.6 ಒಎಸ್‌ಎಸ್‌ II ಅನ್ನು ಬಿಡುಗಡೆ ಮಾಡಿದೆ. ಇದು ILCE-7V ನ ಹೈ-ಸ್ಪೀಡ್ ನಿರಂತರ ಶೂಟಿಂಗ್ ಅನ್ನು ಬೆಂಬಲಿಸುವ ಪೂರ್ಣ-ಫ್ರೇಮ್ ಹೊಂದಾಣಿಕೆಯ, ಪುಟ್ಟ ಮತ್ತು ಹಗುರವಾದ ಪ್ರಮಾಣಿತ ಜೂಮ್ ಲೆನ್ಸ್ ಆಗಿದೆ. “ಹೊಸದಾಗಿ ಪರಿಚಯಿಸಿರುವ ILCE-7V ಸರ್ವತೋಮುಖ ಪೂರ್ಣ-ಫ್ರೇಮ್ ಕ್ಯಾಮೆರಾಗೆ ಹೊಸ ಮಾನದಂಡ ನಿಗದಿಪಡಿಸಿದೆ. ಉತ್ತಮ ಇಮೇಜಿಂಗ್ ಅನುಭವ ನೀಡಲು ತಯಾರಿಸಲಾಗಿರುವ ಈ ಕ್ಯಾಮೆರಾ, ಸೃಜನಶೀಲತೆಗೆ ಸಂಬಂಧಿಸಿದ ಸ್ಥಾಪಿತ ನಿರೀಕ್ಷೆಗಳನ್ನು ಹುಸಿ ಮಾಡಲಿರುವುದರ ಜೊತೆಗೆ ಕಲ್ಪನೆಗೆ ಮೀರಿದ ದೃಶ್ಯ ಸೆರೆಹಿಡಿಯುವ ವಿಶಿಷ್ಟ ಸಾಧನವಾಗಿದೆ.

   ಸುಧಾರಿತ ನಿಯಂತ್ರಣಗಳು, ಮುಂದಿನ ಪೀಳಿಗೆಯ ನಾವೀನ್ಯತೆ ಮತ್ತು ಮಿಂಚಿನ ವೇಗ ಬಯಸುವ ಛಾಯಾಗ್ರಾಹಕರ ಬಳಕೆಗಾಗಿ ಇದನ್ನು ತಯಾರಿಸಲಾಗಿದೆʼ ಎಂದು ಸೋನಿ ಇಂಡಿಯಾದ ಡಿಜಿಟಲ್ ಇಮೇಜಿಂಗ್ ವ್ಯವಹಾರದ ಮುಖ್ಯಸ್ಥ ಮುಖೇಶ್ ಶ್ರೀವಾಸ್ತವ ಹೇಳಿದ್ದಾರೆ. 

   ILCE-7V AI ಸಂಸ್ಕರಣಾ ಘಟಕವನ್ನು BIONZ XR2 ಎಂಜಿನ್‌ಗೆ ಸಂಯೋಜಿಸುತ್ತದೆ. ಇದು ಆಟೊಫೋಕಸ್ ವೇಗ, ನಿಖರತೆ ಮತ್ತು ವಿಶ್ವಾಸಾರ್ಹತೆಯಲ್ಲಿ ಗಣನೀಯ ಸುಧಾರಣೆ ನೀಡುತ್ತದೆ. ILCE-7V ನೈಜ ಸಮಯದ ಗುರುತಿಸುವಿಕೆಯಲ್ಲಿ ಎಎಫ್‌ನಲ್ಲಿ ಶೇಕಡ 30ರವರೆಗಿನ ಸುಧಾರಣೆ ಹೊಂದಿದೆ. ಅದು ಗುರಿಪಡಿಸಿದ ವಿಷಯ- ವಸ್ತುಗಳನ್ನು ತಕ್ಷಣ ಗುರುತಿಸುತ್ತದೆ ಹೆಚ್ಚಿನ ನಿಖರತೆ ಯೊಂದಿಗೆ ಅವುಗಳನ್ನು ಸೆರೆಹಿಡಿಯುವುದನ್ನು ಮುಂದುವರಿಸುತ್ತದೆ. 759 ಹಂತ-ಪತ್ತೆ ಹಚ್ಚುವಿಕೆ ಬಿಂದುಗಳು ಮತ್ತು ಶೇಕಡ 94ರಷ್ಟು ಫ್ರೇಮ್ ಕವರೇಜ್‌ನೊಂದಿಗೆ, ಕ್ಯಾಮೆರಾವು EV -4.0 ವರೆಗಿನ ಕಡಿಮೆ-ಬೆಳಕಿನ ಪರಿಸ್ಥಿತಿಗಳಲ್ಲಿಯೂ ಸಹ, ಬಹುತೇಕ ಸಂಪೂರ್ಣ ಚಿತ್ರ ಆವರಿಸಿರುವ ವಿಷಯ – ವಸ್ತುವಿನ ಟ್ರ್ಯಾಕಿಂಗ್ ಅನ್ನು ಖಚಿತಪಡಿಸುತ್ತದೆ.

   ಸರಿಸಾಟಿ ಇಲ್ಲದ ಪೋಸ್ಟ್-ಪ್ರೊಡಕ್ಷನ್ ನಮ್ಯತೆಗಾಗಿ ಇಮೇಜಿಂಗ್ ಎಡ್ಜ್ ಡೆಸ್ಕ್‌ಟಾಪ್ ಅಪ್ಲಿಕೇಶನ್ ಮೂಲಕ ಹೈ-ರೆಸಲ್ಯೂಷನ್ RAW ಸಂಸ್ಕರಣೆಗೆ ಈಗ ಬೆಂಬಲ ದೊರೆಯಲಿದೆ. ಭಾಗಶಃ ಜೋಡಿಸಲಾದ Exmor RS™ CMOS ಇಮೇಜ್ ಸೆನ್ಸರ್‌ನ ಸಂಯೋಜನೆಯು ಸರಿಸುಮಾರು 4.5 ಪಟ್ಟು ವೇಗದಲ್ಲಿ ಕಾರ್ಯನಿರ್ವಹಿಸಲಿದೆ. BIONZ XR2™ ಪ್ರೊಸೆಸರ್ ಕನಿಷ್ಠ ಅಸ್ಪಷ್ಟತೆ ಯೊಂದಿಗೆ ಚಿತ್ರದ ಹೆಚ್ಚಿನ ಗುಣಮಟ್ಟವನ್ನು ನೀಡುತ್ತದೆ.

   ಇದಕ್ಕೆ ಪೂರಕವಾಗಿ, ಪ್ರತಿ ಸೆಕೆಂಡಿಗೆ 60 ಪಟ್ಟು AF/AE ಲೆಕ್ಕಾಚಾರಗಳೊಂದಿಗೆ ಮತ್ತು 30 fps ವರೆಗೆ ಬ್ಲ್ಯಾಕ್‌ಔಟ್-ಮುಕ್ತ ನಿರಂತರ ಶೂಟಿಂಗ್‌ನೊಂದಿಗೆ ನಾವು ಯಾವಾಗಲೂ ಛಾಯಾಗ್ರಾಹಕರನ್ನು ಅರ್ಥಮಾಡಿಕೊಳ್ಳುವ ಮತ್ತು ಅವರು ತಮ್ಮ ಕಲ್ಪನೆ ಹಾಗೂ ಚಿಂತನೆಗಳನ್ನು ಆತ್ಮವಿಶ್ವಾಸದಿಂದ ಸಾಕಾರಗೊಳಿಸಲು ಅನುವು ಮಾಡಿಕೊಡುವ ಉತ್ಪನ್ನಗಳನ್ನು ತಯಾರಿಸುವುದರ ಸುತ್ತ ನಮ್ಮ ಧ್ಯೇಯ ಕೇಂದ್ರೀಕೃತವಾಗಿದೆ. ಭಾರತವು ದೃಶ್ಯ ಸೃಷ್ಟಿಕರ್ತರ ಗಮನಾರ್ಹ ಏರಿಕೆಗೆ ಸಾಕ್ಷಿಯಾ ಗುತ್ತಿದೆ. ಸೋನಿ ಇಂಡಿಯಾ ಈ ಬೆಳವಣಿಗೆಯಲ್ಲಿ ಸಕ್ರಿಯವಾಗಿ ಭಾಗಿಯಾಗಲು ಹೆಮ್ಮೆಪಡುತ್ತದೆ. ILCE-7V ಮೂಲಕ, ನಾವು ನಮ್ಮ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದನ್ನು ಮುಂದುವರಿಸು ತ್ತೇವೆ.

   ವಿಶ್ವಾಸಾರ್ಹ, ಅರ್ಥಪೂರ್ಣ ಮತ್ತು ವಿಶ್ವ ದರ್ಜೆಯ ಇಮೇಜಿಂಗ್ ಪರಿಹಾರಗಳನ್ನು ನಾವು ನೀಡುತ್ತೇವೆ.   ಛಾಯಾಗ್ರಾಹಕರು ತಮ್ಮ ದೃಷ್ಟಿಯನ್ನು ಸ್ಪಷ್ಟತೆ, ಉದ್ದೇಶ ಮತ್ತು ಕಲ್ಪನೆ ಯೊಂದಿಗೆ ರೂಪಿಸಲು ಇದು ಅವರನ್ನು ಸಬಲೀಕರಣಗೊಳಿಸಲಿದೆ. AF/AE ಟ್ರ್ಯಾಕಿಂಗ್ ಸೌಲಭ್ಯವು ವನ್ಯಜೀವಿ ಮತ್ತು ಕ್ರೀಡಾ ಛಾಯಾಗ್ರಹಣದಂತಹ ಸಂಕೀರ್ಣ ಮಾದರಿಗಳಲ್ಲಿ ದೃಶ್ಯಗಳು ವೇಗವಾಗಿ ಬದಲಾಗುತ್ತಿದ್ದರೂ ಸಹ ಯಾವುದೇ ಸಂಗತಿ ತಪ್ಪಿಸಿಕೊಳ್ಳದಿರುವುದನ್ನು ಖಚಿತಪಡಿಸುತ್ತದೆ. 14-ಬಿಟ್ RAW ಶೂಟಿಂಗ್ ಸಮಯದಲ್ಲಿಯೂ ಸಹ, ಇದು AF/AE ಟ್ರ್ಯಾಕಿಂಗ್‌ನೊಂದಿಗೆ 30 fps ವರೆಗೆ ಹೆಚ್ಚಿನ ವೇಗದ ನಿರಂತರ ಶೂಟಿಂಗ್ ಅನ್ನು ಸಾಧಿಸುತ್ತದೆ.

    ಶಟರ್ ಒತ್ತುವ ಮೊದಲು 1 ಸೆಕೆಂಡ್ವರೆಗೆ ರೆಕಾರ್ಡ್ ಮಾಡಬಹುದಾದ ಪ್ರಿ-ಕ್ಯಾಪ್ಚರ್ ಕಾರ್ಯವು, ಸಾಕುಪ್ರಾಣಿಗಳು ಮತ್ತು ಕ್ರೀಡೆಗಳಂತಹ ಚಲನೆಯನ್ನು ಊಹಿಸಲು ಕಷ್ಟಕರವಾದ ಮಾಹಿತಿ ಯೊಂದಿಗೆ ಸಹ ನಿರ್ಣಾಯಕ ಕ್ಷಣಗಳನ್ನು ಸೆರೆಹಿಡಿಯುತ್ತದೆ. 

    ಗರಿಷ್ಠ ಸೃಜನಶೀಲ ನಿಯಂತ್ರಣಕ್ಕಾಗಿ ವಿನ್ಯಾಸಗೊಳಿಸಲಾಗಿರುವ ILCE-7V, ಪ್ರಖರ ಬೆಳಕು ಮತ್ತು ನೆರಳುಗಳಲ್ಲಿ ಗಮನಾರ್ಹವಾದ ಟೋನಲ್ ವಿವರಗಳನ್ನು ಖಚಿತಪಡಿಸುವ ಡೈನಾಮಿಕ್ ಶ್ರೇಣಿಯ 16 ಸ್ಟಾಪ್‌ಗಳವರೆಗೆ ಸಾಧಿಸುತ್ತದೆ. ತೀವ್ರ ವ್ಯತಿರಿಕ್ತತೆಯನ್ನು ಹೊಂದಿರುವ ದೃಶ್ಯ ಗಳಲ್ಲಿಯೂ ಸಹ, ಇದು ಕತ್ತಲೆಯಿಂದ ಪ್ರಕಾಶಮಾನವಾದ ಪ್ರದೇಶಗಳಿಗೆ ನೈಸರ್ಗಿಕ ಹಂತಗಳನ್ನು ವ್ಯಕ್ತಪಡಿಸುತ್ತದೆ.

   ಹೊಸದಾಗಿ ಪರಿಚಯಿಸಲಾಗಿರುವ ಎಐ-ಚಾಲಿತ ಆಟೊ ವೈಟ್ ಬ್ಯಾಲೆನ್ಸ್ (ಎಡಬ್ಲ್ಯುಬಿ), ವಸ್ತು ವಿನ ನೈಜ ಬಣ್ಣ ತೋರಿಸುವ ಬೆಳಕಿನ ಮೂಲದ ಸಾಮರ್ಥ್ಯಕ್ಕಾಗಿ ಸುಧಾರಿತ ದೃಶ್ಯ ವಿಶ್ಲೇಷಣೆ ಯನ್ನು ನಿಯಂತ್ರಿಸುತ್ತದೆ ಮತ್ತು ತಂತ್ರಜ್ಞಾನ ವಿಶ್ಲೇಷಣೆ ಮೂಲಕ ಬೆಳಕಿನ ಮೂಲವನ್ನು ಬಳಸುತ್ತದೆ. ಚಿತ್ರೀಕರಣ ಪರಿಸರದಲ್ಲಿ ಬೆಳಕಿನ ಮೂಲವನ್ನು ಹೆಚ್ಚಿನ ನಿಖರತೆ ಯೊಂದಿಗೆ ಸ್ವಯಂಚಾಲಿತವಾಗಿ ಗುರುತಿಸುವ ಮೂಲಕ ಮತ್ತು ಸೂಕ್ತವಾದ ಬಣ್ಣದ ಟೋನ್‌ಗಳಿಗೆ ಹೊಂದಿ ಸುವ ಮೂಲಕ, ಇದು ನೈಸರ್ಗಿಕ ಮತ್ತು ಸ್ಥಿರವಾದ ಬಣ್ಣದ ಪುನರ್‌ ಉತ್ಪಾದನೆಯನ್ನು ಸಕ್ರಿಯ ಗೊಳಿಸುತ್ತದೆ, ಇದರ ಪರಿಣಾಮವಾಗಿ ಹೆಚ್ಚು ವಿಶ್ವಾಸಾರ್ಹ ಬಣ್ಣಗಳು ಮತ್ತು ಚಿತ್ರೀಕರಣ ನಂತರದ ಕೆಲಸದ ಹೊರೆ ಕಡಿಮೆಯಾಗುತ್ತದೆ. 

   ಹೈಬ್ರಿಡ್ ಛಾಯಾಗ್ರಾಹಕರಿಗೆ ಸೃಜನಶೀಲ ಸಾಧ್ಯತೆಗಳನ್ನು ವಿಸ್ತರಿಸಿರುವ ILCE-7V, ಹೆಚ್ಚುವರಿ 4ಕೆ ರೆಕಾರ್ಡಿಂಗ್ ಮೋಡ್‌ಗಳನ್ನು ಪರಿಚಯಿಸುತ್ತದೆ, ಇದರಲ್ಲಿ ಪೂರ್ಣ-ಫ್ರೇಮ್ ಮೋಡ್‌ನಲ್ಲಿ ಲಭ್ಯವಿರುವ 7ಕೆ ಓವರ್‌ಸ್ಯಾಂಪಲ್ಡ್ 4ಕೆ 60ಪಿ ರೆಕಾರ್ಡಿಂಗ್ ಮತ್ತು ಎಪಿಎಸ್‌-ಸಿ ಮೋಡ್‌ನಲ್ಲಿ 4ಕೆ 120ಪಿ ರೆಕಾರ್ಡಿಂಗ್/ಸೂಪರ್ 35ಎಂಎಂ ಸಂಕಲನದಲ್ಲಿ ಅಸಾಧಾರಣ ಅನುಕೂಲತೆಯೊಂದಿಗೆ ದಾಖಲಾದ ದೃಶ್ಯಗಳ ಸಮೃದ್ಧ ವಿವರಗಳನ್ನು ನೀಡುತ್ತದೆ. ಪಿಕ್ಸೆಲ್ ಬಿನ್ನಿಂಗ್ ಇಲ್ಲದೆ ಪೂರ್ಣ ಪಿಕ್ಸೆಲ್ ರೀಡ್‌ಔಟ್ ಹೆಚ್ಚು ವಿವರವಾದ ವಿಡಿಯೊ ರೆಕಾರ್ಡಿಂಗ್ ಒದಗಿಸುತ್ತದೆ.

    ದೃಶ್ಯ ಸ್ಥಿರತೆಯು ಡೈನಾಮಿಕ್ ಆ್ಯಕ್ಟಿವ್ ಮೋಡ್ ಹೊಂದಿದೆ, ಇದು ಹ್ಯಾಂಡ್‌ಹೆಲ್ಡ್‌ನಲ್ಲಿದ್ದಾಗಲೂ ಸುಗಮ ಮತ್ತು ಸ್ಥಿರವಾದ ವಿಡಿಯೊ ಒದಗಿಸುತ್ತದೆ. ಬಳಕೆದಾರರು ಅಂತರ್ಜಾಲದಲ್ಲಿ ಹರಿಬಿಡುವ ವಿಡಿಯೊಗಳು ಮತ್ತು ಸೃಜನಶೀಲ ನಿರ್ಮಾಣಗಳಿಂದ ಹಿಡಿದು ಕುಟುಂಬದ ನೆನಪುಗಳನ್ನು ಸೆರೆಹಿಡಿಯುವವರೆಗೆ ವ್ಯಾಪಕ ಶ್ರೇಣಿಯ ದೃಶ್ಯಗಳಲ್ಲಿ ಉತ್ತಮ-ಗುಣಮಟ್ಟದ ವಿಡಿಯೊ ರೆಕಾರ್ಡಿಂಗ್ ಸೌಲಭ್ಯ ಆನಂದಿಸಬಹುದು.

    ಈ ಕ್ಯಾಮೆರಾ ಆಟೊ ಫ್ರೇಮಿಂಗ್ ಕಾರ್ಯವನ್ನು ಸಹ ಹೊಂದಿದೆ, ಇದು ʼಎಐʼ ಚಾಲಿತ ವಿಷಯ – ವಸ್ತು ಗುರುತಿಸುವಿಕೆಯ ಮೂಲಕ ರೆಕಾರ್ಡಿಂಗ್ ಸಮಯದಲ್ಲಿ ವಿಷಯ – ವಸ್ತುಗಳ ಅತ್ಯುತ್ತಮ ಸಂಯೋಜನೆಯನ್ನು ಸ್ವಯಂಚಾಲಿತವಾಗಿ ನಿರ್ವಹಿಸಲಿದೆ. ಇದು ವಿವಿಧ ದೃಶ್ಯಗಳಲ್ಲಿ ಸ್ಥಿರ ಸಂಯೋಜನೆಯ ವೀಡಿಯೊ ರೆಕಾರ್ಡಿಂಗ್ ಅನ್ನು ಸಕ್ರಿಯಗೊಳಿಸುತ್ತದೆ.

   ಕ್ಯಾಮೆರಾದಲ್ಲಿ ಅಳವಡಿಸಲಾಗಿರುವ ಹೊಸ ಸದ್ದು ನಿರ್ಬಂಧಿಸುವ ಮತ್ತು ಸುಧಾರಿತ ಆಂತರಿಕ ಮೈಕ್,   ಹಿನ್ನೆಲೆ ಸದ್ದುಗಳನ್ನು ಕಡಿಮೆ ಮಾಡುವ, ಹಸ್ತಕ್ಷೇಪವನ್ನು ತಗ್ಗಿಸುವ ಮತ್ತು ನೈಸರ್ಗಿಕ ಧ್ವನಿ ನಿರ್ವಹಿಸುವ ಮೂಲಕ ಉತ್ತಮ-ಗುಣಮಟ್ಟದ ಆಡಿಯೊ ರೆಕಾರ್ಡಿಂಗ್ ಖಚಿತಪಡಿಸುತ್ತದೆ. 

   ILCE-7V ಮೇಲ್ದರ್ಜೆಗೆ ಏರಿಸಿದ ಪವರ್ ಮ್ಯಾನೇಜ್‌ಮೆಂಟ್ ಮತ್ತು ವರ್ಧಿತ ಸಾಮರ್ಥ್ಯ ಕಾರ್ಯಕ್ಷಮತೆಯನ್ನು ಹೊಂದಿದೆ, ಇದು ಅಡಚಣೆಯಿಲ್ಲದೆ ದೀರ್ಘಾವಧಿಯ ಚಿತ್ರೀಕರಣಕ್ಕೆ ನೆರವಾಗಲಿದೆ. ಹೊಸ ಮಾನಿಟರ್ ಲೋ ಬ್ರೈಟ್ ಮೋಡ್- ಬ್ಯಾಟರಿ ಬಾಳಿಕೆಯನ್ನು ಇನ್ನಷ್ಟು ವಿಸ್ತರಿಸಲಿದೆ.  ಸುಧಾರಿತ ಥರ್ಮಲ್ ಮ್ಯಾನೇಜ್‌ಮೆಂಟ್ ರಾಜಿಯಾಗದ ಗುಣಮಟ್ಟದೊಂದಿಗೆ ವಿಸ್ತೃತ 4ಕೆ ರೆಕಾರ್ಡಿಂಗ್ ಮಾಡಲು ನೆರವಾಗಲಿದೆ. CIPA ಮಾನದಂಡಗಳ ಪ್ರಕಾರ ವ್ಯೂಫೈಂಡರ್ ಬಳಸುವಾಗ ಸರಿಸುಮಾರು 630 ಚಿತ್ರಗಳನ್ನು ಸೆರೆಹಿಡಿಯಲಿದೆ. 

     ಇದೊಂದು ಪುಟ್ಟ ಗಾತ್ರದ, ಹಗುರ ಮತ್ತು ತ್ವರಿತವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸ ಲಾದ FE 28-70mm F3.5-5.6 OSS II ಲೆನ್ಸ್ ಅನ್ನು ILCE-7V ಸಂವೇದಕದ ನಿರಂತರ ಶೂಟಿಂಗ್ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಂದಾಣಿಕೆಯಾಗುವ ಕ್ಯಾಮೆರಾಗಳೊಂದಿಗೆ ಸಂಯೋಜಿಸಿದಾಗ, ಈ ಹೊಸ ಲೆನ್ಸ್ 120 fps ವರೆಗೆ AF/AE ಟ್ರ್ಯಾಕಿಂಗ್, ನಿರಂತರ ಶೂಟಿಂಗ್, ಸೀಮ್‌ಲೆಸ್ ಬಾಡಿ-ಲೆನ್ಸ್ ಸಂಯೋಜಿತ ಚಿತ್ರ ಸ್ಥಿರತೆ, ಜೂಮ್ ಮಾಡುವಾಗಲೂ ಲಭ್ಯವಿರುವ AF ಮತ್ತು ಅಂತರ್‌ನಿರ್ಮಿತ ಸೌಲಭ್ಯ ನೀಡುತ್ತದೆ. ಡೈನಾಮಿಕ್ ಆ್ಯಕ್ಷನ್ ದೃಶ್ಯ ಸೆರೆ ಹಿಡಿಯುವಿಕೆಗಳಿಂದ ಹಿಡಿದು ವೇಗವಾಗಿ ಘಟಿಸುವ ಸನ್ನಿವೇಶ ಗಳು ಅಥವಾ ಉತ್ತಮ-ಗುಣಮಟ್ಟದ ವಿಡಿಯೊ ಸೆರೆ ಹಿಡಿಯುವವರೆಗೆ, ಈ ಲೆನ್ಸ್ ಸುಗಮ, ವಿಶ್ವಾಸಾರ್ಹ ಪ್ರತಿಕ್ರಿಯೆ ಮತ್ತು ಅನುಕೂಲತೆ ಒದಗಿಸುತ್ತದೆ.

Recent Articles

spot_img

Related Stories

Share via
Copy link