ಬಿಗ್ ಬಾಸ್ ಸೀಸನ್ 12ರ 18 ಕಂಟೆಸ್ಟೆಂಟ್​ಗಳ ಹೆಸರು ಲೀಕ್……?

ಬೆಂಗಳೂರು :

   ಕನ್ನಡದ ಜನಪ್ರಿಯ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12  ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 28 ರಿಂದ ದೊಡ್ಮನೆ ಆಟ ಶುರುವಾಗಿದೆ. ಈಗಾಗಲೇ ಕಲರ್ಸ್ ಕನ್ನಡ ಎರಡು ಪ್ರೋಮೋ ಬಿಟ್ಟು ವೀಕ್ಷಕರ ತಲೆಗೆ ಹುಳ ಬಿಟ್ಟಿದೆ. ಈ ಪ್ರೋಮೋಗಳನ್ನು ನೋಡಿದ ಬಳಿಕ ಶೋ ಮೇಲಿನ ಕುತೂಹಲ ದುಪ್ಪಟ್ಟಾಗಿದೆ. ಅದರಲ್ಲೂ ಎರಡನೇ ಪ್ರೋಮೋಗೆ ಎಐ ಟಚ್ ನೀಡಲಾಗಿದ್ದು, ಇದೇ ಈ ಬಾರಿಯ ಕಾನ್ಸೆಪ್ಟ್ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ.

    ಬಿಗ್ ಬಾಸ್ 12 ಪ್ರೋಮೋ ಹೊರಬಿದ್ದ ಬೆನ್ನಲ್ಲೇ ಈ ಬಾರಿ ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವರೇ ಎಂಬ ಗುಸುಗುಸು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಎರಡು-ಮೂರು ಹೆಸರುಗಳು ಕೇಳಿ ಬರುತ್ತಿದ್ದವು. ಆದರೆ ಈ ಬಾರಿ ಎಲ್ಲ 18 ಕಂಟೆಸ್ಟೆಂಟ್​ಗಳ ಲಿಸ್ಟ್ ವೈರಲ್ ಆಗುತ್ತಿದೆ. ಇವರೇ ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳು ಎಂದು ಹೇಳಲಾಗುತ್ತಿದೆ. ಅವರು ಯಾರು?, ಇಲ್ಲಿದೆ ನೋಡಿ ಪಟ್ಟಿ.

   ಈ ಸಾಲಿನಲ್ಲಿ ಕೇಳಿಬರುತ್ತಿರುವ ಮೊದಲ ಹೆಸರು ಸಾಗರ್ ಬಿಳಿಗೌಡ. ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ್ ಅವರ ಸತ್ಯ ಸೀರಿಯಲ್​ನಲ್ಲಿ ಸಾಗರ್ ಹೀರೋ ಆಗಿ ಕಾಣಿಸಿಕೊಂಡಿದ್ದರು. ಎರಡನೇ ಸ್ಪರ್ಧಿ ಸಂಜನಾ ಬುರ್ಲಿ ಎಂದು ಹೇಳಲಾಗಿದೆ. ಇವರು ಪುಟ್ಟಕನ್ನ ಮಕ್ಕಳು ಧಾರಾವಾಹಿಯಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಹಾಗೆಯೆ ನಂತರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ ವಿಡಿಯೋ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಸಮೀರ್ ಎಂಡಿ ಹೆಸರು ಕೂಡ ಇದರಲ್ಲಿದೆ.

   ಖಾಸಗಿ ಚಾನೆಲ್​ನಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ವಸಂತ್, ಗಗನ್ ಶ್ರೀನಿವಾಸ್ (ಡಾ. ಬ್ರೋ) ಹಾಗೂ ಸ್ವಾತಿ ಕೂಡ ದೊಡ್ಮನೆಯೊಳಗೆ ಕಾಲಿಡಲಿದ್ದಾರಂತೆ. ನಂತರದ ಹೆಸರು ಶ್ವೇತಾ ಪ್ರಸಾದ್. ಆರಂಭದಲ್ಲಿ ಧಾರಾವಾಹಿಗಳ ಮೂಲಕ ಶ್ವೇತಾ ಗಮನ ಸೆಳೆದವರು. ಆ ಬಳಿಕ ಅವರು ಆರ್​ಜೆ ಪ್ರದೀಪ್ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಮೇಘಾ ಶೆಟ್ಟಿ ಕೂಡ ಬಿಬಿಕೆಗೆ ಹೋಗಲಿದ್ದಾರಂತೆ. ಅರವಿಂದ್ ರತ್ನನ್, ಪಯಲ್ ಚಂಗಪ್ಪ, ವರುಣ್ ಆರಾಧ್ಯ ಹೆಸರು ಕೂಡ ಇದೆ. 

   ಇನ್ನು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ರಲ್ಲಿ ಡ್ರೋನ್‌ ಪ್ರತಾಪ್‌ಗೆ ಜೋಡಿಯಾಗಿ ಮೂರನೇ ರನ್ನರ್ ಅಪ್ ಆದ ಗಗನಾ ಕೂಡ ಬಿಗ್ ಬಾಸ್ ಸ್ಪರ್ಧಿಯಂತೆ. ಬಿಗ್ ಬಾಸ್ ಆರಂಭವಾಗುವ ಹೊತ್ತಿಗೆ ದೃಷ್ಟಿಬೊಟ್ಟು ಧಾರಾವಾಹಿ ಮುಕ್ತಾಯ ಕಾಣಲಿದೆಯಂತೆ. ಇದರಲ್ಲಿ ಮುಖ್ಯ ಪಾತ್ರ ಮಾಡುತ್ತಿರುವ ವಿಜಯ್ ಸೂರ್ಯ ಕೂಡ ಲಿಸ್ಟ್​ನಲ್ಲಿದ್ದಾರೆ. ಉಳಿದಂತೆ ದೀಪಿಕಾ ಗೌಡ, ಗೀತಾ ಧಾರಾವಾಹಿಯ ಧನುಷ್, ಅಮೃಟಾ ರಾಮಾಮೂರ್ತಿ, ಸಿಂಗರ್ ಸುನಿಲ್ ಹಾಗೈ ಬಾಲು ಬೆಳಗುಂಡಿ ಬಿಬಿಕೆ 12 ಸ್ಪರ್ಧಿಗಳು ಎನ್ನಲಾಗಿದೆ.

Recent Articles

spot_img

Related Stories

Share via
Copy link