ನವದೆಹಲಿ
ಇತ್ತೀಚೆಗಷ್ಟೆ ರಾಜಿನಾಮೆ ನೀಡಿದ್ದ ಬಿಎಸ್ ಕೊಶಿಯಾರಿ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕಾರ ಮಾಡಿದರು. ಮಹಾರಾಷ್ಟ್ರಕ್ಕೆ ನೂತನ ರಾಜ್ಯಪಾಲರನ್ನು ಸಹ ನೇಮಕ ಮಾಡಲಾಗಿದೆ.
ಮಾಜಿ ಸಂಸದ ರಮೇಶ್ ಬೈಸ್‌ರನ್ನು ದ್ರೌಪದಿ ಮುರ್ಮು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ. ಜಾರ್ಖಂಡ್ ಮತ್ತು ತ್ರಿಪುರ ರಾಜ್ಯದ ರಾಜ್ಯಪಾಲರಾಗಿ ರಮೇಶ್ ಬೈಸ್ ಕಾರ್ಯ ನಿರ್ವಹಣೆ ಮಾಡಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ 80 ವರ್ಷದ ಬಿಎಸ್ ಕೊಶಿಯಾರಿ ಜನವರಿಯಲ್ಲಿ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ