GST 2.0: ಇಂದಿನಿಂದ ಹೊಸ ಹೊಸ GST ಸ್ಲ್ಯಾಬ್‌ ಜಾರಿ

ನವದೆಹಲಿ: 

    ಕೇಂದ್ರ ಸರ್ಕಾರ ದೇಶದ ಜನತೆಗೆ ಸಿಹಿ ಸುದ್ದಿ ನೀಡಿದ್ದು, ಜಿಎಸ್‌ಟಿ  ದರವನ್ನು ಕಡಿಮೆಗೊಳಿಸಿದೆ. ಇಂದಿನಿಂದ ಈ ದರ ಯಾರಿಗೆ ಬರಲಿದೆ ಸರಕು ಮತ್ತು ಸೇವಾ ತೆರಿಗೆಯಲ್ಲಿನ ಪರಿಷ್ಕರಣೆಗಳು ಕೆಲವೊಂದು ವಸ್ತುಗಳನ್ನು ದುಬಾರಿಯಾಗಿಸಿದರೆ ಇನ್ನು ಕೆಲವು ವಸ್ತುಗಳನ್ನು ಅಗ್ಗಗೊಳಿಸಲಿದೆ. ಜಿಎಸ್ ಟಿ 2.0  ದಲ್ಲಿ ಪರಿಷ್ಕರಣೆಗಳಿಂದಾಗಿ  ಸರಕುಗಳ ಮೇಲಿನ ತೆರಿಗೆಯನ್ನು ಶೇ. 5, 18 ಮತ್ತು 40ಕ್ಕೆ ಪರಿಷ್ಕರಿಸಲಾಗುತ್ತದೆ. ಇದು ದೇಶದ ಆರ್ಥಿಕ ವಲಯದಲ್ಲಿ ಹಲವು ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಇದೆ.

   ಪ್ರಸ್ತುತ ಶೇ. 12ರಷ್ಟು ತೆರಿಗೆ ವಿಧಿಸಿರುವ ಅನೇಕ ಗೃಹೋಪಯೋಗಿ ಉತ್ಪನ್ನಗಳು ಶೇ. 5ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಸೋಪ್‌, ಶಾಂಪುಗಳು, ಬಿಸ್ಕತ್ತು, ತಿಂಡಿ, ಜ್ಯೂಸ್‌ಗಳು, ತುಪ್ಪ, ಡೈರಿ ಉತ್ಪನ್ನಗಳು, ಬೈಸಿಕಲ್‌ ಮತ್ತು ಸ್ಟೇಷನರಿ, ಉಡುಪು, ಪಾದರಕ್ಷೆಗಳು ಸೇರಿ ಹಲವು ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಲಿದೆ. ಗೃಹೋಪಯೋಗಿ ಉಪಕರಣಗಳಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲಿನ ತೆರಿಗೆ ಶೇ. 28ರಿಂದ ಶೇ. 18ಕ್ಕೆ ಇಳಿಯಲಿದೆ. ಇದರ ಪರಿಣಾಮ ಎಲೆಕ್ಟ್ರಾನಿಕ್ ಉತ್ಪನ್ನಗಳು ಶೇ. 7- 8ರಷ್ಟು ಅಗ್ಗವಾಗಲಿದೆ. ಇದರಲ್ಲಿ ಎಸಿ, ರೆಫ್ರಿಜರೇಟರ್‌, ಡಿಶ್‌ವಾಶರ್‌, ಟಿವಿ, ಸಿಮೆಂಟ್ ಇತ್ಯಾದಿಗಳು ಸೇರಿವೆ. ಇವು ಭಾರತದಲ್ಲಿ ಬೆಳೆಯುತ್ತಿರುವ ಮಧ್ಯಮ ವರ್ಗಕ್ಕೆ ಬಹುದೊಡ್ಡ ಪ್ರಯೋಜನವನ್ನು ಒದಗಿಸಲಿದೆ.

   ಆರೋಗ್ಯ ಹಾಗೂ ಜೀವ ವಿಮೆಯನ್ನು ಶೂನ್ಯ ಜಿಎಸ್‌ಟಿಗೆ ತರಲಾಗಿದೆ. 1,200 ಸಿಸಿಗಿಂತ ಕಡಿಮೆ ಎಂಜಿನ್ ಗಾತ್ರ ಹೊಂದಿರುವ ಸಣ್ಣ ಕಾರುಗಳು, ದ್ವಿಚಕ್ರ ವಾಹನಗಳ ತೆರಿಗೆ ಕೂಡ ಶೇ. 28ರಿಂದ ಶೇ. 18ಕ್ಕೆ ಇಳಿಯಲಿದೆ. ಕೆಲವು ಸರಕುಗಳು ಶೇ. 40ರಷ್ಟು ತೆರಿಗೆಯನ್ನು ಎದುರಿಸಲಿದೆ. ಇದರಲ್ಲಿ ತಂಬಾಕು ಉತ್ಪನ್ನಗಳು, ಮದ್ಯ, ಪಾನ್ ಮಸಾಲಾ, ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು ಸೇರಿವೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಯಿಂದ ಹೊರಗೆ ಇರಿಸಲಾಗುವುದು. ಹೀಗಾಗಿ ಇಂಧನ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. 

    ಜಿಎಸ್‌ಟಿ ಪರಿಷ್ಕರಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶವನ್ನು ಉದ್ದೇಶಿಸಿ ಮಾಡಿದ 19 ನಿಮಿಷದ ಭಾಷಣದಲ್ಲಿ ಹಬ್ಬದ ಋುತುವಿನಲ್ಲಿ ಸ್ವದೇಶಿ ವಸ್ತುಗಳನ್ನು ಖರೀದಿಸುವಂತೆ ಭಾರತೀಯರಿಗೆ ಕರೆ ನೀಡಿದರು. ಅಮೆರಿಕ ವಿಧಿಸಿದ 50% ಸುಂಕ, ಎಚ್‌1ಬಿ ವೀಸಾ ಹೆಚ್ಚಳ ಹಿನ್ನೆಲೆಯಲ್ಲಿಮೋದಿ ಅವರು ಮತ್ತೊಮ್ಮೆ ಸ್ವದೇಶಿ ಮಂತ್ರ ಪಠಿಸುವ ಮೂಲಕ ಆತ್ಮನಿರ್ಭರ ಭಾರತ ನಿರ್ಮಿಸಲು ಕರೆ ನೀಡಿದ್ದಾರೆ.

Recent Articles

spot_img

Related Stories

Share via
Copy link