ಹೊಸ ಅವತಾರದಲ್ಲಿ ಬಂತು ದೇಸಿ “ಜಿ-ವ್ಯಾಗನ್(ಫೋರ್ಸ್- ಗೂರ್ಖಾ) “…!

ಮುಂಬೈ:

     ಫೋರ್ಸ್ ಮೋಟಾರ್ಸ್ ತನ್ನ ಮುಂಬರುವ ಕಾರಿನ ಲುಕ್‌ ರಿಲೀಸ್ ಮಾಡಿದೆ. ಈ ಕಾರ್‌ ಆಕರ್ಷಕವಾಗಿ ಕಾಣುತ್ತಿದ್ದು, ಗ್ರಾಹಕರನ್ನು ಸೆಳೆಯಲಿದೆ. ಫೋರ್ಸ್ ಮೋಟಾರ್ಸ್ ಕಂಪನಿ SUV ಗೂರ್ಖಾದ ಐದು ಬಾಗಿಲಿನ ಆವೃತ್ತಿಯ ಮೊದಲ ನೋಟವನ್ನು ಬಿಡುಗಡೆ ಮಾಡಿದೆ.

     ಈ ಕಂಪನಿ ಕಳೆದ ಎರಡು ವರ್ಷಗಳಿಂದ ಈ ಕಾರ್‌ ಮೇಲೆ ಕೆಲಸವನ್ನು ಮಾಡುತ್ತಿದೆ. ಅಲ್ಲದೆ ಕಂಪನಿ ಹಲವು ಬಾರಿ ಭಾರತದಲ್ಲಿ ಹಲವು ಬಾರಿ ಪರೀಕ್ಷಣೆಗೆ ಒಳಪಟ್ಟಿದೆ. ಈ ಹೊಸ ಕಾರಿನ ಡೋರ್‌ ಈಗಾಗಲೇ ಮಾರುಕಟ್ಟೆಯಲ್ಲಿರುವ ಗೋರ್ಖಾ 3ಗಿಂತಲೂ ಉದ್ದದ ವೀಲ್‌ ಬೇಸ ಹೊಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷದ ಜೂನ್‌ನಲ್ಲಿ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದು.

    ಫೋರ್ಸ್‌ ಕಂಪನಿಯ ಮುಂದಿನ ಕಾರ್‌ ಸಹ ಗೋರ್ಖಾ 3 ಬಾಗಿಲಿನಂತೆ ಕಾಣುತ್ತದೆ ಎಂದು ಚಿತ್ರಗಳು ಪುಷ್ಠಿ ಪಡಿಸುತ್ತಿವೆ. ಆದರೆ ಈ ಕಾರಿನಲ್ಲಿ ಕೆಲವು ಬದಲಾವಣೆ ಕಾಣಬಹುದು. ಗೋರ್ಖಾ ಹೊಸ ಕಾರಿನಲ್ಲಿ ಹೊಸ ವಿನ್ಯಾಸದಲ್ಲಿ ಹೆಡ್‌ಲ್ಯಾಂಪ್‌ ನೋಡಬಹುದು. ಆದಾಗ್ಯೂ, ಲೈಫ್‌ಸ್ಟೈಲ್ ಎಸ್‌ಯುವಿಯಲ್ಲಿ ಕಂಪನಿಯ ಸಿಗ್ನೇಚರ್ ಟು-ಸ್ಲ್ಯಾಟ್ ಗ್ರಿಲ್ ಅನ್ನು ಸಹ ಒದಗಿಸಲಾಗುತ್ತದೆ. ಇದಲ್ಲದೇ, ಇತ್ತೀಚಿನ ಕಾರಿಗೆ 18-ಇಂಚಿನ ಡೈಮಂಡ್-ಕಟ್ ಡ್ಯುಯಲ್ ಟೋನ್ ಅಲಾಯ್ ಚಕ್ರಗಳು ಮತ್ತು 3-ಡೋರ್ ಆವೃತ್ತಿಯ 16-ಇಂಚಿನ ಚಕ್ರಗಳ ಬದಲಿಗೆ 2 ಹೆಚ್ಚುವರಿ ಚಕ್ರ ಒದಗಿಸಲಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಬಂಪರ್‌ಗಳನ್ನು ಹೊರತುಪಡಿಸಿ, ಯಾವುದೇ ಪ್ರಮುಖ ಬಾಹ್ಯ ಬದಲಾವಣೆಗಳನ್ನು ಕಾಣುವುದಿಲ್ಲ.

    ಮುಂಬರುವ ಕಾರಿಗೆ ಡ್ಯಾಶ್‌ಬೋರ್ಡ್‌ನ ಮಧ್ಯದಲ್ಲಿ 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಮುಂಭಾಗ ಮತ್ತು ಹಿಂಭಾಗದ ಪವರ್ ಕಿಟಕಿಗಳು ಮತ್ತು ಬಹು ದ್ವಾರಗಳೊಂದಿಗೆ ಮ್ಯಾನುವಲ್ ಎಸಿಯಂತಹ ವೈಶಿಷ್ಟ್ಯಗಳನ್ನು ನೀಡಬಹುದು. ಸುರಕ್ಷತೆಗಾಗಿ, ಕಾರಿನಲ್ಲಿ ಡ್ಯುಯಲ್ ಏರ್‌ಬ್ಯಾಗ್‌ಗಳು, ರಿವರ್ಸ್ ಕ್ಯಾಮೆರಾ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ನಂತಹ ವೈಶಿಷ್ಟ್ಯಗಳನ್ನು ಕಾಣಬಹುದು.

    ಹೊಸ ಕಾರಿನ ಕ್ಯಾಬಿನ್‌ ವಿವರಗಳನ್ನು ಕಂಪನಿಯು ಇನ್ನು ಬಹಿರಂಗ ಪಡಿಸಿಲ್ಲ. ಆದರೆ ಹಿಂದೆ ಬಿಡುಗಡೆಯಾದ ಸ್ಪೈ ಶಾಟ್‌ಗಳ ಪ್ರಕಾರ ಡಾರ್ಕ್‌ ಗ್ರೇ ಬಣ್ಣದ ಕ್ಯಾಬಿನ್‌ ಹೊಂದಿರುವ ನಿರೀಕ್ಷೆ ಇದೆ. ಗೂರ್ಖಾದ ಉದ್ದನೆಯ ವೀಲ್‌ಬೇಸ್ ಆವೃತ್ತಿಯಲ್ಲಿ ಕೊಂಚ ಬದಲಾವಣೆ ಕಾಣಬಹುದಾಗಿದೆ.

    5-ಬಾಗಿಲಿನ ಆವೃತ್ತಿಯು 17-ಇಂಚಿನ ಡೈಮಂಡ್-ಕಟ್ ಅಲಾಯ್ ಚಕ್ರಗಳನ್ನು ಪಡೆಯುವ ಸಾಧ್ಯತೆಯಿದೆ, 3-ಬಾಗಿಲಿನ ಗೂರ್ಖಾದಲ್ಲಿ ಕಂಡುಬರುವ 16-ಇಂಚಿನ ಚಕ್ರಗಳಿಗಿಂತ ಭಿನ್ನವಾಗಿದೆ. ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಸಹ ನವೀಕರಿಸುವ ಸಾಧ್ಯತೆ ಇದೆ. ಟೈಲ್‌ಗೇಟ್ ಮೌಂಟೆಡ್ ಸ್ಪೇರ್ ವೀಲ್, ರೂಫ್ ಮೌಂಟೆಡ್ ಲಗೇಜ್ ರ್ಯಾಕ್, ಜೆರ್ರಿ ಕ್ಯಾನ್ ಮತ್ತು ಸ್ನಾರ್ಕೆಲ್‌ನಂತಹ ಫೀಚರ್‌ಗಳು ತಮ್ಮನ್ನು ನೋಡವಂತೆ ಮಾಡುತ್ತವೆ.

    ಗೂರ್ಖಾ 5-ಬಾಗಿಲು ಇರುವ ಕಾರಿನಲ್ಲಿ 2.6-ಲೀಟರ್, ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಬಳಸುವ ನಿರೀಕ್ಷೆಯಿದೆ. ಇದು 90 bhp ಪವರ್ ಮತ್ತು 250 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಪ್ರತ್ಯೇಕವಾಗಿ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಹೊಂದಿಸಲಾಗಿದೆ.

    ಫೋರ್ಸ್ ಕಂಪನಿಯ ಈ ಹೊಸ ಕಾರಿನ ಬೆಲೆ ಭಾರತದಲ್ಲಿ 16 ಲಕ್ಷದಿಂದ ಆರಂಭವಾಗುವ ಸಾಧ್ಯತೆ ಇದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ 3-ಬಾಗಿಲಿನ ಗೂರ್ಖಾ ಆರಂಭಿಕ ಬೆಲೆ 5.10 ಲಕ್ಷ ಹೊಂದಿದೆ. ಈ ಸೆಗ್ಮೆಂಟ್‌ನಲ್ಲೇ ಬರಲಿರುವ ಐದು ಬಾಗಿಲಿನ ಥಾರ್ ಹಾಗೂ ಮಾರುತಿ ಜಿಮ್ನಿಯೊಂದಿಗೆ ಪೈಪೋಟಿ ನಡೆಸಲಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap