ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದಿಂದ ಹೊಸ ಸುತ್ತೋಲೆ ….!

ಬೆಂಗಳೂರು:

     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯವು ತನ್ನ ಇಲಾಖೆಗಳು ಆಯೋಜಿಸುವ ಯಾವುದೇ ಕಾರ್ಯಕ್ರಮಗಳಲ್ಲಿ ಹಾರ ಅಥವಾ ಹೂಗುಚ್ಛಗಳನ್ನು ಬಳಸದಂತೆ ಅಧಿಕಾರಿಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಿದೆ. ಬದಲಿಗೆ ಅವರು ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು ಎಂದಿದೆ.

      ಈ ನಿರ್ದೇಶನವು ಆರೋಗ್ಯ ಇಲಾಖೆ, ಆಯುಷ್, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ ಮತ್ತು ಇತರರಿಗೆ ಅನ್ವಯಿಸುತ್ತದೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುವ ಸಾರ್ವಜನಿಕರಿಗಾಗಿ ಸಹ ಇದು ಉದ್ದೇಶಿಸಲಾಗಿದೆ.

    ಮೊದಲಿಗೆ ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಗೌರವಾರ್ಥವಾಗಿ ಜನರು ನೀಡುವ ಹೂವುಗಳು ಅಥವಾ ಶಾಲುಗಳಿಗಿಂತ ಪುಸ್ತಕಗಳಿಗೆ ಆದ್ಯತೆ ನೀಡುವುದಾಗಿ ಮೇ 21 ರಂದು ಹೇಳಿದ್ದರು.ಇದೇ ಹಾದಿಯನ್ನು ಅನುಸರಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೂ, ಇನ್ಮುಂದೆ ಸನ್ಮಾನದ ಸಂದರ್ಭದಲ್ಲಿ ಹಾರ, ತುರಾಯಿ, ಶಾಲುಗಳನ್ನು ನೀಡುವ ಬದಲು ಪುಸ್ತಕಗಳನ್ನು ನೀಡಿ ಎಂದು ಮನವಿ ಮಾಡಿದ್ದಾರೆ.

    ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಕೂಡ ಹಾರ, ಹೂಗುಚ್ಛಗಳನ್ನು ನೀಡುವ ಬದಲು ಪುಸ್ತಕಗಳನ್ನು ನೀಡುವಂತೆ ಮನವಿ ಮಾಡಿ ಸುತ್ತೋಲೆ ಹೊರಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap