ಕುಟುಂಬಕ್ಕಾಗಿ ಜಿಯೋದಿಂದ ಹೊಸ ಪ್ಲಾನ್‌…!

ತುಮಕೂರು:

   ಭಾರತದ ಅತ್ಯಂತ ಶ್ರೀಮಂತ ಮತ್ತು ಭಅರತೀಯರಿಗೆ ಫ್ರೀ ಡೇಟಾ ನೀಡಿ ವ್ಯಾಪಾರ ಚಾಕಚಕ್ಯತೆ ಮೆರೆದಿದ್ದ ರಿಲಯನ್ಸ್ ಜಿಯೋ ಪ್ಲಸ್ ಒಂದು ತಿಂಗಳ ಉಚಿತ ಪ್ರಯೋಗದೊಂದಿಗೆ ಬಿಡುಗಡೆಗೊಳಿಸಿದೆ. ಜಿಯೋ ಪ್ಲಸ್ ಯೋಜನೆಯಲ್ಲಿ ಮೊದಲ ಸಂಪರ್ಕಕ್ಕಾಗಿ ಗ್ರಾಹಕರು 399 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಯೋಜನೆಗೆ 3 ಹೆಚ್ಚುವರಿ ಸಂಪರ್ಕಗಳನ್ನು ಸೇರಿಸಬಹುದು.

   ಯಾವುದೇ ಸಂಪರ್ಕವನ್ನು ಸೇರಿಸಲು ಗ್ರಾಹಕರು ಪ್ರತಿ ಕನೆಕ್ಷನ್ಗಾಗಿ ಹೆಚ್ಚುವರಿ 99 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

    ಹೊಸ ಪ್ಲಾನ್‌  ನಲ್ಲಿ ಒಟ್ಟು 4 ಸಂಪರ್ಕಗಳು ಇರಲಿವೆ ಅಂದ್ರೆ ಒಂದು ತಿಂಗಳಿಗೆ ನೀವು ಒಟ್ಟು 696 (399+99+99+99) ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಅತ್ಯಂತ ಅದ್ಭುತ ವಿಷಯವೆಂದರೆ ಇದರಲ್ಲಿ ನೀಡಲಾಗುವ 75GB ಡೇಟಾ ಸಾಗ ಲಭ್ಯವಿದೆ. ಇದರಲ್ಲಿ 4 ಕನೆಕ್ಷನ್ಗಳನ್ನು ಒಳಗೊಂಡಿರುವ ಈ ಕುಟುಂಬ ಯೋಜನೆಯಲ್ಲಿ ಗ್ರಾಹಕರು ಒಂದು ಸಿಮ್ಗೆ ತಿಂಗಳಿಗೆ ಸುಮಾರು 174 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ ಇದು ಆರ್ಥಿಕವಾಗಿ ನಿಮ್ಮ ಜೇಬಿನ ಮೇಲಿನ ಹೊರೆಯನ್ನು ಕಡಿಮೆ ಮಾಡಲಿದೆ.

    ನಿಮಗೆ ಹೆಚ್ಚುವರಿ ಡೇಟಾ ಅಗತ್ಯವಿದೆ ಎಂದು ಭಾವಿಸಿದರೆ ನೀವು 100 GB ಡೇಟಾವನ್ನು ಹೊಂದಿರುವ ಯೋಜನೆಯನ್ನು ಸಹ ಆಯ್ಕೆ ಮಾಡಬಹುದು ಮತ್ತು ಹೀಗಾಗಿ ನಿಮ್ಮ ಡೇಟಾ ಈ ಯೋಜನೆಯಲ್ಲಿ ಕೊನೆಗೊಳ್ಳುವುದಿಲ್ಲ. ಈ ಯೋಜನೆಯನ್ನು ಸಕ್ರಿಯಗೊಳಿಸಲು ಗ್ರಾಹಕರು ಮೊದಲ ಸಂಪರ್ಕದಲ್ಲಿ ರೂ 699 ಪಾವತಿಸಬೇಕಾಗುತ್ತದೆ ಮತ್ತು ಉಳಿದ ಎಲ್ಲಾ ಹೆಚ್ಚುವರಿ ಸಂಪರ್ಕಗಳಿಗೆ ಅವರು ಪ್ರತಿ ಸಂಪರ್ಕಕ್ಕೆ ರೂ 99 ಪಾವತಿಸಬೇಕಾಗುತ್ತದೆ. ಕೇವಲ 3 ಹೆಚ್ಚುವರಿ ಸಂಪರ್ಕಗಳನ್ನು ಮಾತ್ರ ಜೋಡಿಸಬಹುದು. ಕಂಪನಿಯು ಮಾರುಕಟ್ಟೆಯಲ್ಲಿ ಕೆಲವು ವೈಯಕ್ತಿಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರೂ 299 ಕ್ಕೆ 30GB ಡೇಟಾ ಯೋಜನೆ ಜೊತೆಗೆ ರೂ 599 ಗೆ ಅನಿಯಮಿತ ಡೇಟಾ ಯೋಜನೆ ಸೇರಿವೆ.

    ರಿಲಯನ್ಸ್ ಜಿಯೋ  ವೆಲ್ಕಮ್ ಆಫರ್ನೊಂದಿಗೆ ಗ್ರಾಹಕರಿಗೆ ಅನಿಯಮಿತ 5G ಡೇಟಾವನ್ನು ನೀಡ ಲಾಗುತ್ತಿದ್ದು ಇದನ್ನು ನಿಮ್ಮ ಇಡೀ ಕುಟುಂಬ ಬಳಸಬಹುದು. ಗ್ರಾಹಕರು ತಮ್ಮ ಆಯ್ಕೆಯ ಸಂಖ್ಯೆಯನ್ನು ಸಹ ಆಯ್ಕೆ ಮಾಡಬಹುದು. ಇದರಲ್ಲಿ ಗ್ರಾಹಕರಿಗೆ ಸಿಂಗಲ್ ಬಿಲ್ಲಿಂಗ್, ಡೇಟಾ ಹಂಚಿಕೆ ಮತ್ತು ನೆಟ್ಫ್ಲಿಕ್ಸ್, ಅಮೆಜಾನ್, ಜಿಯೋ ಟಿವಿ ಮತ್ತು ಜಿಯೋ ಸಿನಿಮಾದಂತಹ ಪ್ರೀಮಿಯಂ ಕಂಟೆಂಟ್ ಅಪ್ಲಿಕೇಶನ್ಗಳನ್ನು ಸಹ ನೀಡಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap