ಯಶ್​ ಹುಟ್ಟುಹಬ್ಬಕ್ಕೆ ‘ಕೆಜಿಎಫ್​ 2’ ಹೊಸ ಪೋಸ್ಟರ್

KGF :

ಯಶ್​ ಬರ್ತ್​ಡೇ ಪ್ರಯುಕ್ತ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಿಂದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡು ಫ್ಯಾನ್ಸ್​ ಸಂಭ್ರಮಿಸುತ್ತಿದ್ದಾರೆ.

‘ರಾಕಿಂಗ್​ ಸ್ಟಾರ್​’ ಯಶ್​  ಅವರಿಗೆ ಇಂದು (ಜ.8) ಹುಟ್ಟುಹಬ್ಬದ ಸಂಭ್ರಮ.

           ಈ ದಿನದ ಖುಷಿಯನ್ನು ಹೆಚ್ಚಿಸಲು ‘ಹೊಂಬಾಳೆ ಫಿಲ್ಮ್ಸ್​’ಕೂಡ ಸಾಥ್​ ನೀಡಿದೆ. ಅಭಿಮಾನಿಗಳ ಆಸೆಯಂತೆಯೇ ಯಶ್​ ಜನ್ಮದಿನದ ಪ್ರಯುಕ್ತ ‘ಕೆಜಿಎಫ್​: ಚಾಪ್ಟರ್​ 2’  ಸಿನಿಮಾದಿಂದ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ.

    ಬೆಳಗ್ಗೆ 9 ಗಂಟೆಗೆ ಪೋಸ್ಟರ್​ ರಿಲೀಸ್​ ಮಾಡುವುದಾಗಿ ಚಿತ್ರತಂಡ ಒಂದು ದಿನ ಮುಂಚಿತವಾಗಿ ಘೋಷಿಸಿತ್ತು. ಅದಕ್ಕಾಗಿ ಯಶ್​ ಫ್ಯಾನ್ಸ್​ ಕಾದು ಕುಳಿತಿದ್ದರು. ಈಗ ಹೊಸ ಪೋಸ್ಟರ್​  ಕಂಡು ಎಲ್ಲರೂ ಖುಷಿಪಟ್ಟಿದ್ದಾರೆ. ಅಲ್ಲದೇ, ‘ಕೆಜಿಎಫ್​ 2’ ಚಿತ್ರದ ರಿಲೀಸ್​ ದಿನಾಂಕದ ಬಗ್ಗೆ ಕೆಲವರಿಗೆ ಅನುಮಾನ ಮೂಡಿತ್ತು. ಆ ಬಗ್ಗೆಯೂ ಚಿತ್ರತಂಡದಿಂದ ಸ್ಪಷ್ಟನೆ ಸಿಕ್ಕಿದೆ.

2022ರ ಏಪ್ರಿಲ್​ 14ರಂದು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬಿಡುಗಡೆ ಆಗಲಿದೆ ಎಂದು ಈ ಮೊದಲೇ ಘೋಷಿಸಲಾಗಿತ್ತು. ಆದರೆ ಈಗ ದೇಶದಲ್ಲಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಅನೇಕ ಬಿಗ್​ ಬಜೆಟ್​ ಸಿನಿಮಾಗಳು ತಮ್ಮ ರಿಲೀಸ್​ ಡೇಟ್​ ಮುಂದೂಡಿಕೊಂಡಿವೆ.

ಹಾಗಾದ್ರೆ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ರಿಲೀಸ್​ ದಿನಾಂಕದಲ್ಲಿ ಬದಲಾವಣೆ ಆಗಬಹುದಾ ಎಂಬ ಅನುಮಾನ ಮೂಡಿತ್ತು. ಆದರೆ ಹೊಸ ಪೋಸ್ಟರ್​ ಕುರಿತು ಟ್ವೀಟ್​ ಮಾಡಿರುವ ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಯು ಎಂಬ ಹ್ಯಾಶ್​ ಟ್ಯಾಗ್​ ಬಳಸುವ ಮೂಲಕ ರಿಲೀಸ್​ ದಿನಾಂಕದಲ್ಲಿ ಸದ್ಯಕ್ಕಂತೂ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಖಚಿತಪಡಿಸಿದೆ.

ಕಳೆದ ವರ್ಷ ಯಶ್​ ಹುಟ್ಟುಹಬ್ಬದ ದಿನ ‘ಕೆಜಿಎಫ್​: ಚಾಪ್ಟರ್​ 2’ ಟೀಸರ್​ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ಈ ಬಾರಿ ಕೂಡ ಟೀಸರ್​ ಬರಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಆ ರೀತಿ ಯಾವುದೇ ಪ್ಲ್ಯಾನ್​ ಇಲ್ಲ ಎಂಬುದನ್ನು ಕೆಲವೇ ದಿನಗಳ ಹಿಂದೆ ಯಶ್​ ಸ್ಪಷ್ಟಪಡಿಸಿದ್ದರು.

ಅಭಿಮಾನಿಗಳಿಗಾಗಿ ಈಗ ಹೊಸ ಪೋಸ್ಟರ್​ ಬಂದಿದೆ. ಅದನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಫ್ಯಾನ್ಸ್​ ಸಂಭ್ರಮಿಸುತ್ತಿದ್ದಾರೆ.

ಅದ್ಭುತ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಪ್ರಸಿದ್ಧಿ ತಂದುಕೊಟ್ಟ ಕರ್ನಾಟಕದ ಹೆಮ್ಮೆ ರಾಕಿಂಗ್ ಸ್ಟಾರ್  ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಯಶಸ್ಸು, ಆರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.

ಈ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​ ಹಾಗೂ ರವೀನಾ ಟಂಡನ್​ ನಟಿಸಿರುವುದರಿಂದ ಹೈಪ್​ ಹೆಚ್ಚಿದೆ. ಹೊಸದಾಗಿ ಪ್ರಕಾಶ್​ ರೈ ಎಂಟ್ರಿ ಕೂಡ ಆಗಿರುವುದು ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link